Monday, October 19, 2026
Homeಹೆಬ್ರಿಬಾಳೆಕುದ್ರು ಮಠ: ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿ ಚಾತುರ್ಮಾಸ್ಯ ಪರಿಸಮಾಪ್ತಿ: ಧರ್ಮಸಭೆ.

ಬಾಳೆಕುದ್ರು ಮಠ: ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿ ಚಾತುರ್ಮಾಸ್ಯ ಪರಿಸಮಾಪ್ತಿ: ಧರ್ಮಸಭೆ.

ಬಾಳೆಕುದ್ರು ಶ್ರೀಮಠದ ಗತವೈಭವ ಮರುಕಳಿಸಲಿದೆ : ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿ.

ಹಂಗಾರಕಟ್ಟೆ ಬಾಳೆಕುದ್ರು : ಬಾಳೆಕುದ್ರು ಶ್ರೀಮಠವು ಇನ್ನಷ್ಟು ಅಭಿವೃದ್ಧಿಗೊಂಡು ಗತವೈಭವ ಮರುಕಳಿಸಲಿದೆ. ಆಗುವುದೆಲ್ಲವೂ ಒಳ್ಳೇಯದಕ್ಕೆ ಆಗುತ್ತಿದೆ. ಎಲ್ಲಾ ಮಠ ಪಂತಗಳ ಶ್ರೀರಕ್ಷೆಯೂ ದೊರೆತಿದೆ. ವಿಶೇಷ ಪ್ರೇರಣೆ ದೊರೆತಿದೆ. ಎಲ್ಲವೂ ನಿರ್ವಿಘ್ಞವಾಗಿ ನಡೆಯುತ್ತದೆ. ಶ್ರೀಮಠದೊಂದಿಗೆ ಭಕ್ತ ಸಮೂಹ ಕೈಜೋಡಿಸಬೇಕು, ಶ್ರೀಮಠದೊಂದಿಗೆ ಭದ್ರವಾಗಿ ನಿಂತು ಉನ್ನತಿಗೆ ಶ್ರಮಿಸುತ್ತಿರುವ ಸರ್ವರಿಗೂ ಒಳಿತಾಗಲಿ ಎಂದು ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿ ಹರಸಿದರು.
ಹಂಗಾರಕಟ್ಟೆ ಬಾಳೆಕುದ್ರು ಶ್ರೀಮದ್‌ ಜಗದ್ಗುರು ಆದಿಶಂಕರಾಚಾರ್ಯ ಮಹಾಸಂಸ್ಥಾನಮ್‌ ಶ್ರೀ ವಾಗೀಶ್ವರಿ, ಲಕ್ಷ್ಮೀನರಸಿಂಹ ಭಾಗವತ ಮಹಾಪೀಠಮ್‌ ಪುಣ್ಯ ಸಂಗಮ ಕ್ಷೇತ್ರದ ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿಗಳವರ ದ್ವಿತೀಯ ಚಾತುರ್ಮಾಸ್ಯದ ಪರಿಸಮಾಪ್ತಿ ಮತ್ತು ಸೀಮೋಲ್ಲಂಘನ ಕಾರ್ಯಕ್ರಮದ ಬಳಿಕ ಶನಿವಾರ ಶ್ರೀಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಉಡುಪಿ ರಾಜಶೇಖರ್‌ ಹೆಬ್ಬಾರ್‌ ಮಾತನಾಡಿ ಬಾಳೆಕುದ್ರು ಶ್ರೀಮಠವು ಎಲ್ಲರ ಮಠವಾಗಿದೆ. ಲಕ್ಷ್ಮೀನರಸಿಂಹ ದೇವರ ಪೂರ್ಣಾನುಗ್ರಹದಿಂದ ಶ್ರೀಮಠಕ್ಕೆ ಒಳ್ಳೇಯದಾಗುತ್ತದೆ ಎಂದರು. ಉಜಿರೆ ಶ್ರೀ ಜನಾರ್ಧನ ಸ್ವಾಮೀ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರ ಶರತ್‌ ಕೃಷ್ಣ ಪಡುವೆಟ್ನಾಯ ಅವರು ಮಾತನಾಡಿ ಶ್ರೀ ಮಠದ ಜೊತೆಗೆ ಸದಾಕಾಲವೂ ನಾವೆಲ್ಲರೂ ಜತೆಯಾಗಿ ನಿಲ್ಲುತ್ತೇವೆ ಎಂದು ಅಭಯ ನೀಡಿದರು.

ಶ್ರೀ ಬಾಳೆಕುದ್ರು ಮಠದ ಶಕ್ತಿಯನ್ನು ಮತ್ತಷ್ಟು ಜಾಗೃತಗೊಳಿಸುವ ಮಹತ್ವದ ಕಾರ್ಯವನ್ನು ಭಕ್ತಸಮೂಹವು ನಿತ್ಯವೂ ಮಾಡಬೇಕು ಮೂಡಬಿದರೆಯ ಉದ್ಯಮಿ ಅನಂತ ಕೃಷ್ಣ ರಾವ್‌ ಆಶಿಸಿದರು. ಮಠ ಬೆಳಗುತ್ತದೆ ಎಲ್ಲರಿಗೂ ಒಳ್ಳೇಯ ಮನಸ್ಸು ಬರಲಿ, ಧರ್ಮ ಜಾಗೃತವಾಗಲಿ, ಧರ್ಮದ ಕಾರ್ಯ ನಡೆಯಲಿ ಎಂದು ಸುಳ್ಯದ ಕೆವಿಜಿ ಡೆಂಟಲ್‌ ಕಾಲೇಜು ಡಾ.ಯಂ.ಯಂ.ದಯಾಕರ್‌ ಹೇಳಿದರು.

ನಾವು ಯಾರೂ ಶಾಶ್ವತ ಅಲ್ಲ, ಮಠ ಶಾಶ್ವತ, ಬಾಳೆಕುದ್ರು ಶ್ರೀಮಠವು ವೈಭವದಿಂದ ಬೆಳಗಬೇಕು ಎಂದು ನಾಗರಾಧಕ ಮುದ್ದೂರು ಡಾ. ಎನ್.‌ ಬಾಲಕೃಷ್ಣ ವೈದ್ಯ ಆಶಯ ವ್ಯಕ್ತಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಮಾತನಾಡಿ ಚಾತುರ್ಮಾಸ್ಯದ ಸಂಪನ್ನ ಕಾರ್ಯಕ್ರಮದಲ್ಲಿ ಶ್ರೀಮಠಕ್ಕೆ ಬಂದಿರುವುದು ನಮ್ಮ ಪಾಲಿನ ಪುಣ್ಯದ ಕ್ಷಣ ಎಂದರು. ಉದ್ಯಮಿ ಬೆಂಗಳೂರು ಬಂಟರ ಸಂಘದ ಮಾಜಿ ಉಪಾಧ್ಯಕ್ಷ ಭೋಜರಾಜ ಶೆಟ್ಟಿ ಮಾತನಾಡಿ ಹಿಂದೂ ಸಮಾಜವನ್ನು ಶ್ರೀಮಠಗಳು ಉಳಿಸಬೇಕು, ಅಂತಹ ಮಹಾಕಾರ್ಯ ಶ್ರೀ ಬಾಳೆಕುದ್ರು ಮಠದಿಂದ ನಡೆಯುತ್ತಿದೆ. ಬಾಳೆಕುದ್ರು ಅತ್ಯಂತ ಪುರಾತನವಾದ ಪವಿತ್ರಪುಣ್ಯ ಮಠವಾಗಿದೆ, ಶ್ರೀಮಠದ ಜೊತೆಗೆ ನಿರಂತರವಾಗಿ ನಾವು ಇರುತ್ತೇವೆ ಎಂದರು.

ತೆಂಕಕಾರಂದೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರರಾದ ಭಾಗವತ ಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ. ಕೃಷ್ಣ ಸಂಪಿಗೆತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಳೆಕುದ್ರು ಶ್ರೀಮಠಕ್ಕೆ ೩ ಸಾವಿರ ವರ್ಷಗಳ ಇತಿಹಾಸ ಇದೆ ಎನ್ನುವಾಗಲೇ ಅದ್ಭುತ, ರೋಮಾಂಚನವಾಗುತ್ತದೆ. ಶ್ರೀಮಠದ ಸೇವೆ ಮಾಡುವ ಅವಕಾಶ ನಮಗೆಲ್ಲ ದೊರೆತಿರುವುದು ನಮ್ಮ ಪಾಲಿನ ಪುಣ್ಯ, ಶ್ರೀಮಠದ ಪರಂಪರೆ ನಮ್ಮ ಹೆಮ್ಮೆ, ವೈಭವ ಮತ್ತೇ ನಾವೆಲ್ಲಲರೂ ಕಾಣುವಂತಾಗಬೇಕು, ಧರ್ಮವನ್ನು ರಕ್ಷಣೆ ಮಾಡುವವರನ್ನು ಧರ್ಮವೇ ರಕ್ಷಿಸುತ್ತದೆ, ಆ ಕಾರ್ಯವು ಯಾವೂದೇ ಫಲಾಪೇಕ್ಷೆ ಇಲ್ಲದೆ ಶ್ರೀಮಠದಲ್ಲಿ ಭಕ್ತರು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠ ಬ್ರಾಹ್ಮಣ ಸಮುದಾಯದ ಮಠವಲ್ಲ, ಸಮಸ್ತ ಹಿಂದೂ ಧರ್ಮದ ಮಠವಾಗಿದೆ. ಮಠದ ಶಿಷ್ಯಸಮೂಹ ಒಂದಾಗಿ ಸೇವೆ ಮಾಡಬೇಕು, ಕೆಲವೊಂದು ಅಸಂಸ್ಕೃತಿಯ ಕೆಲಸ ನಡೆಯುತ್ತದೆ. ಅಸಂಸ್ಕೃತಿಯ ಕಾರ್ಯಕ್ಕೆ ಎಂದೂ ಒಳ್ಳೇಯದಾಗುವುದಿಲ್ಲ. ಅಸಂಸ್ಕೃತಿ ನಾಶವಾಗಿ ಸಂಸ್ಕೃತಿ ಉಳಿಯುತ್ತದೆ. ನಮಗೆಲ್ಲ ಸೇವೆ ಮಾಡುವ ಶಕ್ತಿಯಿದೆ, ಶ್ರೀಮಠ ಬೆಳಗುತ್ತದೆ ಎಂದರು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಕೊಡಚಾದ್ರಿ ಸೀತಾರಾಮ ಉಪಾಧ್ಯಾಯ, ಕಂಚಿ ಕಾಮಕೋಟಿ ಮಠದ ಪ್ರತಿನಿಧಿ ತ್ಯಾಗರಾಜನ್‌ ಸೇರಿ ಹಲವಾರು ಪ್ರಮುಖರು, ಗಣ್ಯರು, ಸ್ಥಳೀಯ ಭಕ್ತ ಸಮೂಹ ಶ್ರೀಸ್ವಾಮೀಜಿಯವರನ್ನು ಗೌರವಿಸಿದರು. ಧರ್ಮಸಭೆಗೆ ಮುನ್ನ ಶ್ರೀಗಣಪತಿ ಹವನ, ಶ್ರೀ ಗುರು ಪರಂಪರೆಗೆ ಪ್ರಾರ್ಥನೆ, ಮಹಾಮಂಗಳಾರತಿ, ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದು ಬಳಿಕ ಸೀಮೋಲ್ಲಂಘನ ನಡೆಯಿತು. ಬಾಳೆಕುದ್ರು ಶ್ರೀಮಠದ ಚಾತುರ್ಮಾಸ್ಯ ವೃತಾಚರಣಾ ಸಮಿತಿ, ಸೀಮಫಲ್ಲಂಘನ ಸಂಚಾಲನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು. ಶ್ರೀಮಠದ ಆಡಳಿತಾಧಿಕಾರಿ ಅನಿಲ್‌ ಕುಮಾರ್‌ ಮಧ್ಯಸ್ಥ ಸ್ವಾಗತಿಸಿ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್‌ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!