Monday, October 19, 2026
Homeಹೆಬ್ರಿಲೇಔಟ್ ಅನುಮೋದನೆ, ನಮೂನೆ 9/11 ಮತ್ತು ಕಟ್ಟಡ ನಿರ್ಮಾಣ ಪರವಾನಗೆ : ಗ್ರಾಮ‌ ಪಂಚಾಯತ್ ಸ್ಥಳೀಯ...

ಲೇಔಟ್ ಅನುಮೋದನೆ, ನಮೂನೆ 9/11 ಮತ್ತು ಕಟ್ಟಡ ನಿರ್ಮಾಣ ಪರವಾನಗೆ : ಗ್ರಾಮ‌ ಪಂಚಾಯತ್ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ : ಸರ್ಕಾರದ ಮಹತ್ವದ ನಿರ್ಧಾರ.

ಜನರ ಬಹುದಿನದ ಬೇಡಿಕೆ ಈಡೇರಿಸಿದ ಸರ್ಕಾರ : ನವೀನ್ ಕೆ ಅಡ್ಯಂತಾಯ.

ಹೆಬ್ರಿ : ಗ್ರಾಮೀಣ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ, 25 ಸೆಂಟ್ಸ್ (1000 ಚದರ ಮೀಟರ್) ವರೆಗಿನ ವಿನ್ಯಾಸ (ಲೇಔಟ್) ಅನುಮೋದನೆ, ನಮೂನೆ 9/11 ಮತ್ತು ಕಟ್ಟಡ ನಿರ್ಮಾಣ ಪರವಾನಗಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್ ಸ್ಥಳೀಯ ಸಂಸ್ಥೆಗಳಿಗೆ ವಹಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ಸ್ವಾಗತಾರ್ಹ.

ಗ್ರಾಮೀಣ ಜನರು ತಮ್ಮ ಸಣ್ಣಪುಟ್ಟ ಜಾಗಗಳಲ್ಲಿ ಮನೆ ನಿರ್ಮಿಸಲು ಅಥವಾ ನಿವೇಶನ ವಿನ್ಯಾಸ ಹಾಗೂ 9/11 ಅನುಮೋದನೆ ಪಡೆಯಲು ನಗರ ಪ್ರಾಧಿಕಾರ ಅಥವಾ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಇದರಿಂದ ಜನಸಾಮಾನ್ಯರಿಗೆ ಉಂಟಾಗುತ್ತಿದ್ದ ಅನಗತ್ಯ ವಿಳಂಬ ಮತ್ತು ಕಿರುಕುಳಕ್ಕೆ ಕಾಂಗ್ರೆಸ್ ಸರ್ಕಾರ ಶಾಶ್ವತ ಪರಿಹಾರ ಒದಗಿಸಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಿ, ಗ್ರಾಮೀಣ ಜನರ ಮನೆ ಬಾಗಿಲಿಗೆ ತ್ವರಿತ ಸೇವೆ ತಲುಪುವಂತೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಗ್ರಾಮೀಣಾಭಿವೃದ್ಧಿ ಸಚಿವರಿಗೆ ಹೆಬ್ರಿ ತಾಲ್ಲೂಕಿನ ಸಮಸ್ತ ಜನರ ಪರವಾಗಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ನವೀನ್ ಕೆ ಅಡ್ಯಂತಾಯ ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!