ಮುನಿಯಾಲು : ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮರದ 3 ಕುರ್ಚಿ ಹಾಗೂ ಮೂಡುಬೆಟ್ಟು ಅಂಗನವಾಡಿಗೆ ಮರದ 1 ಕುರ್ಚಿಯನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ, ಜಯಲಕ್ಷ್ಮಿ ಟೀಚರ್, ಎಸ್ ಡಿಎಂ ಸಿ ಅಧ್ಯಕ್ಷ ಶೇಖರ್ ಕುಕ್ಕುಜೆ, ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಡಿ. ಲಕ್ಷ್ಮಣ್, ಕುಕ್ಕುಜೆ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್, ಲಯನ್ಸ್ ಕ್ಲಬ್ ನ ಸಂಪತ್ ಕುಮಾರ್, ಮಂಜುನಾಥ್. ಮಂಜುನಾಥ್. ಕೆ, ಹರೀಶ್ ದುಗ್ಗನ್ ಬೆಟ್ಟು, ವಕೀಲರಾದ ರಾಘವ ಕುಕ್ಕುಜೆ, ಶಾಲಾ ಹಳೇ ವಿದ್ಯಾರ್ಥಿಗಳಾದ ಹರೀಶ್ ಕುಕ್ಕುಜೆ, ವಿಜಯ ಪಲಬೆಟ್ಟು, ಶಾಲಾ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



