ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕೊಡಮಾಡುವ
ತಾಲ್ಲೂಕು ಮಟ್ಟದ ಸಾಧಕ ಭಜನಾ ಮಂಡಳಿ ಪ್ರಶಸ್ತಿಯು ಹೆಬ್ರಿ ಬಚ್ಚಪ್ಪು ಶ್ರೀ ದುರ್ಗಾಪರಮೇಶ್ವರಿ ಗದ್ದುಗೆ ಅಮ್ಮನವರ ಭಜನಾ ಮಂಡಳಿಗೆ ಲಭಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮಂಡಳಿ ಅಧ್ಯಕ್ಷ ಹರೀಶ್ ಶೆಟ್ಟಿಗಾರ್ ಮತ್ತು ಸದಸ್ಯರಿಗೆ ಪ್ರಶಸ್ತಿ ವಿತರಿಸಿದರು.
ಶ್ರೀ ಕ್ಷೇತ್ರ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಡಿ ಸುರೇಂದ್ರ ಕುಮಾರ್, ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಜನಾ ಮಂಡಳಿಯು ಭಜನಾ ಕಾರ್ಯಕ್ರಮದ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ನೆರವು, ದೇವಸ್ಥಾನ ಜೀರ್ಣೋದ್ಧಾರ ಸಹಕಾರ, ಸ್ವಚ್ಛತಾ ಅಭಿಯಾನ,ಅಂಗನವಾಡಿ ಕೇಂದ್ರಕ್ಕೆ ಶಾಶ್ವತ ತಗಡು ಚಪ್ಪರ,ಇಂಟರ್ ಲಾಕ್ ಅಳವಡಿಕೆ ಮುಂತಾದ ವೈಶಿಷ್ಟ್ಯ ಕಾರ್ಯಗಳ ಮೂಲಕ ಗಮನ ಸೆಳೆದಿದೆ.



