Sunday, October 18, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ: 26ನೇ ನವ ರಂಗೋತ್ಸವದಲ್ಲಿಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರಿಗೆ...

ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ: 26ನೇ ನವ ರಂಗೋತ್ಸವದಲ್ಲಿಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರಿಗೆ ಕರ್ಣಾಟನಾಡ ಪೋಷಕ ಪ್ರಶಸ್ತಿ.

ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನಡೆಯುವ 26ನೇ ನವ ರಂಗೋತ್ಸವದಲ್ಲಿ ನೀಡುವ ಕರ್ಣಾಟನಾಡ ಪೋಷಕ ಪ್ರಶಸ್ತಿಗೆ ಸಂದೀಪ್ ಶೆಟ್ಟಿ ಹೆಗ್ಗದ್ದೆ ಮಾಧ್ಯಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಧರ್ಮದರ್ಶಿ ವಿಜಯಕೀರ್ತಿ ಸುಕುಮಾರ ಮೋಹನ್ ತಿಳಿಸಿದ್ದಾರೆ.

ಸಂದೀಪ್ ಶೆಟ್ಟಿ ಪರಿಚಯ :

ಹೆಸರು ಸಂದೀಪ್ … ಜನ ಗುರುತಿಸಿರೋದು ಸಂದೀಪ್ ಶೆಟ್ಟಿ ಹೆಗ್ಗದ್ದೆ. ಸಿನಿಮಾ ಗೀತ ಸಾಹಿತಿಯಾಗಬೇಕೆನ್ನುವ ಹಂಬಲದಿಂದ ಕುಂದಾಪುರದಿಂದ ಬೆಂಗಳೂರಿಗೆ ಬಂದ ಹುಡುಗ, ಮಾಧ್ಯಮ ಕ್ಷೇತ್ರಕ್ಕೆ ಧುಮುಕಿ ಟಿವಿ ಹಾಗೂ ಪತ್ರಿಕೆಗಳಲ್ಲಿ ಕೆಲಸ ಮಾಡಿ ಇವತ್ತು ‘ಹೆಗ್ಗದ್ದೆ ಸ್ಟುಡಿಯೋ ಡಿಜಿಟಲ್ ವಾಹಿನಿ’ಯ ಮೂಲಕ ರಾಜ್ಯ, ದೇಶ, ವಿದೇಶದಲ್ಲಿ ಪರಿಚಯವಾಗಿದ್ದಾರೆ.

ಬಂಡಾಡಿ ಶಶಿಧರ್ ಶೆಟ್ಟಿ ಮತ್ತು ಜಲಜಾಕ್ಷಿ ಶೆಡ್ತಿ ಹೆಗ್ಗದ್ದೆಯವರ ಕಿರಿಯ ಪುತ್ರನಾಗಿ ಇವರಿಗೆ ಬರವಣಿಗೆ ಮತ್ತು ಹಾಡುವ ಹವ್ಯಾಸ ಚಿಕ್ಕಂದಿನಿಂದಲೇ ಇದ್ದಿದ್ದರಿಂದ ಬಿ.ಕಾಂ ಮತ್ತು ಎಂ.ಕಾಂ ಪದವಿ ಶಿಕ್ಷಣದಲ್ಲೇ ಕಾಲೇಜು ಪತ್ರಿಕೆಗಳಲ್ಲಿ ಸಂಪಾದಕ ಮತ್ತು ಸ್ಥಳೀಯ ಪತ್ರಿಕೆಗಳಿಗೆ ಕೆಲಸ ಮಾಡಿ, ಕೆಲವೊಂದು ಆರ್ಕೆಸ್ಟ್ರಾ ಗಳಲ್ಲೂ ಹಾಡಿ- ಕುಣಿದು ಜನ ಮೆಚ್ಚುಗೆಯಾದ ನಂತರ ಬೆಂಗಳೂರಿಗೆ ಬಂದಿದ್ದು, 2012 ರಲ್ಲಿ ತಮ್ಮ ಮೊದ ಮೊದಲ ಕವನ ಗುಚ್ಚಗಳಿಗೆ ‘ಯುವಕವಿ ಪ್ರಶಸ್ತಿ’ ಪಡೆದಿದ್ದರೆನ್ನುವುದು ಹೆಮ್ಮೆಯ ವಿಷಯ. ತದನಂತರ ಛಾಯಾ ಕನ್ನಡಿಗ ಬಿರುದು, ಚಾಣಾಕ್ಯ, ತೌಳವ ಸಿರಿ ಪ್ರಶಸ್ತಿ, ನೂರಾರು ಸನ್ಮಾನಗಳು ಇವರ ಕೆಲಸಕ್ಕೆ ಸಂದಿದೆ.
‘ಮಡಕೆ ಮಾರುವ ಹುಡುಗ, ಕಿಂಗ್ ಕ್ಲೀನ್’ ಎನ್ನುವ ಎರಡು ಕೃತಿಗಳನ್ನ ಬರೆದಿದ್ದು, ಇನ್ನೂ ಬಿಡುಗಡೆಯಾಗಬೇಕಾದ ಐದಾರು ಕೃತಿಗಳೂ ಬಗಲಲ್ಲಿದೆ.
ಸರಿಸುಮಾರು 7000 ಕ್ಕಿಂತ ಜಾಸ್ತಿ ವಿಡಿಯೋಗಳನ್ನ ಡಿಜಿಟಲ್ ಮಿಡಿಯಾದಲ್ಲಿ ನಿರೂಪಣೆ ಮತ್ತು ಹೊಣೆಗಾರಿಕೆಯಲ್ಲಿ ಮಾಡಿದ್ದು ನಿವೇದಿತಾ ಸಂದೀಪ್ ಶೆಟ್ಟಿ ಹೆಗ್ಗದ್ದೆ ಪತ್ನಿಯೊಂದಿಗೆ, ಸನಿಹ ಎಸ್. ಶೆಟ್ಟಿ ಹೆಗ್ಗದ್ದೆ ಎನ್ನುವ ಮುದ್ದಾದ ಮಗಳ ಜೊತೆ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಪ್ರಜಾ ಟಿವಿಯಲ್ಲಿ ಕಾಪಿ ಎಡಿಟರ್ ಆಗಿ, ಸಿರಿ ಪತ್ರಿಕೆಯಲ್ಲಿ ಉಪ ಸಂಪಾದಕನಾಗಿ, ಸಿರಿ ಮ್ಯೂಸಿಕ್‌ಗೆ CEO ಆಗಿ ಚಿಕ್ಕ ವಯಸ್ಸಲ್ಲೇ ಕಾರ್ಯ ನಿರ್ವಹಿಸಿದ ಇವರು ತದ ನಂತರ ‘ಹೆಗ್ಗದ್ದೆ ಸಂಸ್ಥೆ’ ಕಟ್ಟಿ ಅದರ ವ್ಯವಸ್ಥಾಪನಾ ಹೊಣೆಗಾರಿಕೆಯನ್ನ ಏರಿಸಿಕೊಂಡು ಇವತ್ತು ಅನೇಕ ಅಭಿಮಾನಿಗಳನ್ನ ಹೊಂದಿದ್ದಾರೆ.

ಸರಳವಾದ ಬದುಕಿನ ಜೊತೆಗೆ, ಸ್ಪಷ್ಟವಾದ ಕನ್ನಡದ ಜೊತೆ ನಿಖರವಾದ ಗುರಿಯಿಟ್ಟು ನಡೆದ ಇವರ ಜೀವನ ಅನೇಕ ಯುವಕರಿಗೆ ಮಾದರಿ ಎಂದರೆ ತಪ್ಪಿಲ್ಲ. ಎಲ್ಲಿಯೂ ತನ್ನ‌ ಬಗ್ಗೆ ಹೇಳದೆ, ಯಾರ ಕೈಗೂ ಜಾಸ್ತಿ ಸಿಗದೇ ತನ್ನದೇ ಸಾಮ್ರಾಜ್ಯ ಕಟ್ಟಿದ ಇವರ ಸಮಾಜ ಮುಖಿಯ ಕೆಲಸಗಳೂ ಪ್ರತಿ ವರ್ಷ ಅನೇಕ ಸಾಂಸ್ಕೃತಿಕ ಕೆಲಸಗಳ‌ ಮೂಲಕ ಊರೂರುಗಳಲ್ಲಿ ನಡೆಯುತ್ತಲೇ ಇರುತ್ತದೆ.

ಆರೋಗ್ಯದ ಕಳಕಳಿಯಲ್ಲಿ ನೂರಾರು ಕಾರ್ಯಕ್ರಮ ಮಾಡಿರುವ ಇವರು ತೀರ್ಥಹಳ್ಳಿಯಲ್ಲಿ‌ ‘ಹೆಗ್ಗದ್ದೆ ಆಯುರ್ ಕಲ್ಚರ್’ ಕಛೇರಿಯನ್ನ ಆರಂಭಿಸಿ ಅಲ್ಲಿಂದ ಇವತ್ತು ದೇಶ ಮತ್ತು ವಿದೇಶದ‌ ನಾನಾ ಭಾಗಗಳಿಗೆ ಆಯುರ್ವೇದದ ಹರ್ಬ್ಸ್ ಮತ್ತು ಮಲ್ನಾಡ್ ನ ಉತ್ಪನ್ನಗಳನ್ನ ತಲುಪಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ ಫೋಟೋಗ್ರಫಿ ಯಲ್ಲೂ ‌ಆಸಕ್ತಿಯನ್ನ ಹೊಂದಿದ್ದು ಹುಟ್ಟೂರಾದ ಕುಂದಾಪುರದ ಮಾರಣಕಟ್ಟೆಯಲ್ಲಿ ‘ಹೆಗ್ಗದ್ದೆ ಫೋಟೋಗ್ರಫಿ ಕಛೇರಿ’ಯನ್ನೂ ಆರಂಭಿಸಿ ಅಲ್ಲಿಯೂ ಒಂದಿಷ್ಟು ಜನರಿಗೆ ಕೆಲಸವನ್ನೂ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!