ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನಡೆಯುವ 26ನೇ ನವ ರಂಗೋತ್ಸವದಲ್ಲಿ ನೀಡುವ ಕರ್ಣಾಟನಾಡ ಪೋಷಕ ಪ್ರಶಸ್ತಿಗೆ ಅಯೋಧ್ಯೆ ಉದ್ಯಮಿ ಸಮಾಜ ಸೇವಕ ಕುಂದಾಪುರ ನಂದ್ರೋಳ್ಳಿ ತೋಟದ ಮನೆಯ ಪ್ರಭಾಕರ ಶೇಖರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಧರ್ಮದರ್ಶಿ ವಿಜಯಕೀರ್ತಿ ಸುಕುಮಾರ ಮೋಹನ್ ತಿಳಿಸಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ ಯಶಸ್ವಿ ಉದ್ಯಮಿ ಪ್ರಭಾಕರ ಶೇಖರ ಶೆಟ್ಟಿ ಅವರು ಬೆಳಗಾಂ ನಲ್ಲಿ ಹೊಟೇಲ್ ಉದ್ಯಮ ಸ್ತಾಪಿಸಿ ಬಳಿಕ ಹಂತಹಂತವಾಗಿ ಮುನ್ನಡೆದು ಅಯೋಧ್ಯೆಯಲ್ಲೂ ಹೊಟೇಲ್ ಆರಂಭಿಸಿ ಖ್ಯಾತಿಯನ್ನು ಪಡೆದಿದ್ದಾರೆ. ಧಾರ್ಮಿಕ ಸಮಾಜಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿದ್ದಾರೆ
ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ 26ನೇ ನವ ರಂಗೋತ್ಸವ. ನಂದ್ರೋಳ್ಳಿ ಪ್ರಭಾಕರ ಶೇಖರ ಶೆಟ್ಟಿ ಅವರಿಗೆ ಕರ್ಣಾಟನಾಡ ಪೋಷಕ ಪ್ರಶಸ್ತಿ.



