Sunday, October 18, 2026

 

ಹೆಬ್ರಿ : ಹೆಬ್ರಿಯ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಅಕ್ಟೋಬರ್‌ 12 ರಿಂದ 21ರ ತನಕ ಶರನ್ನವರಾತ್ರಿ ಮಹೋತ್ಸವ ಭಕ್ತಿ ವೈಭವದಿಂದ ನಡೆಯಲಿದೆ. 12 ರಂದು ಕದಿರು ಕಟ್ಟುವುದು, 15 ರಂದು ಲಲಿತಾ ಪಂಚಮಿ, ಬೆಳಿಗ್ಗೆ ಸಾರ್ವಜನಿಕ ರುದ್ರಾಭಿಷೇಕ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಹಾಲು ಪಾಯಸ ಸೇವೆ, ಕುಂಕುಮಾರ್ಚನೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ಸಾಮೂಹಿಕ ಹೂವಿನ ಪೂಜೆ ಬಳಿಕ ಬ್ರಹ್ಮಬೈದರ್ಕಳಿಗೆ ಪಂಚಕಜ್ಜಾಯ ಸೇವೆ ನಡೆಯಲಿದೆ.

ಸಂಜೆ ಹೆಬ್ರಿ ಪಾಂಚಜನ್ಯ ಯಕ್ಷಕಲಾ ಪ್ರತಿಷ್ಠಾನ ಮತ್ತು ಅತಿಥಿ ಕಲಾವಿದರಿಂದ ವತಿಯಿಂದ ವೀರಮಣಿ ಕಾಳಗ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

21 ರಂದು ಬೆಳಿಗ್ಗೆ ಗಿಲ್ಲಾಳಿ ಪದ್ಮನಾಭ ಆಚಾರ್ಯ ನೇತ್ರತ್ವದಲ್ಲಿ ಬೆಳಿಗ್ಗೆ ಸಾರ್ವಜನಿಕ ರುದ್ರಾಭಿಷೇಕ, ಕುಂಕುಮಾರ್ಚನೆ, ಸಾರ್ವಜನಿಕ ಚಂಡಿಕಾ ಯಾಗ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಶ್ರೀ ಸಾಯಿಶಿವ ಕಲಾಲಯ ಎಜುಕೇಷನ್‌ ಆರ್ಗನೈಸೇಷನ್‌ ಇದರ ಮಯೂರಿ ನಾಟ್ಯಕಲಾ ಕೇಂದ್ರ ಹೆಬ್ರಿ ಇವರಿಂದ ನೃತ್ಯ ವೈವಿದ್ಯ, ಹೆಬ್ರಿ ತಾಲ್ಲೂಕು ಪಂಚಾಯಿತಿ ಸಂಜೀವಿನಿ ಬಳಗದ ಸ್ವಸ್ತಿಕ್‌ ಮಹಿಳಾ ಚೆಂಡೆ ಬಳಗದಿಂದ ಪೂಜಾ ಚೆಂಡೆ ವಾದನ ನಡೆಯಲಿದೆ ಎಂದು ಕ್ಷೇತ್ರದ ಅನುವಂಶಿಕ ಮೋಕ್ತೇಸರ ತಾರಾನಾಥ ಬಲ್ಲಾಳ್‌ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!