ಕಡ್ತಲ : ಕಡ್ತಲ ಸಿರಿಬೈಲು ಶ್ರೀ ಬರ್ಭರೇಶ್ವರ ದುರ್ಗಾಪರಮೇಶ್ವರೀ ಶ್ರೀ ದೇವಿಯ ಸನ್ನಿಧಿಯಲ್ಲಿ ಕುಕ್ಕಿಕಟ್ಟೆ ವೇದಮೂರ್ತಿ ಶ್ರೀ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಅ. 11ರಂದು ಚಂಡಿಕಾಹೋಮ ನಡೆಯಲಿದೆ.
ಅ. 11ರಂದು ದೇವತಾ ಪ್ರಾರ್ಥನೆ, ಮಹಾಪೂಜೆ, ಚಂಡಿಕಾಹೋಮ ಪೂರ್ಣಾಹುತಿ, ದೇವಿದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ
ಅ.11 ರಿಂದ 21 ರವರೆಗೆ ಪ್ರತಿದಿನ ನವರಾತ್ರಿಯ ಪ್ರಯುಕ್ತ ರಾತ್ರಿ ದೇವಿ ಪಾರಾಯಣ, ಲಲಿತ ಸಹಸ್ರನಾಮ, ನವರಾತ್ರಿ
ಪೂಜೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿ, ಸಿರಿಬೈಲು ಕಡ್ತಲ ಇವರಿಂದ ಭಜನಾ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಜರಗಲಿದೆ. ಅ.21ರಂದು ರಾತ್ರಿ 9.00 ಗಂಟೆಗೆ ದೇವಸ್ಥಾನದ ಸಬಾಭವನದಲ್ಲಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಸಂಘ (ರಿ.) ದೊಂಡೇರಂಗಡಿ, ಕುಕ್ಕುಜೆ ಇವರಿಂದ ಕಾಲಮಿತಿ ಯಕ್ಷಗಾನ “ಭಸ್ಮಾಸುರ ಮೋಹಿನಿ” ಪ್ರದರ್ಶನಗೊಳ್ಳಲಿದೆ.




