Sunday, October 18, 2026

ಮುದ್ರಾಡಿ  : ಧರ್ಮಯೋಗಿ ಮೋಹನ್‌ ಸ್ವಾಮೀಜಿ ಸ್ಥಾಪಿಸಿದ ಪ್ರಸಿದ್ಧ ಮುದ್ರಾಡಿ ಶ್ರೀ ಅಭಯಹಸ್ತೆ ಆದಿಶಕ್ತಿ ಕ್ಷೇತ್ರವು ಸುಕುಮಾರ್‌ ಮೋಹನ್‌ ಅವರ ಪರಿಶ್ರಮದ ಮೂಲಕ ಇಂದು ವಿಶ್ವದೆತ್ತರಕ್ಕೆ ಖ್ಯಾತಿ ಪಡೆದಿದೆ. ನಮತುಳುವೆರ್‌ ಕಲಾ ಸಂಘಟನೆ ಸಾಟಿಯೇ ಇಲ್ಲದಂತೆ ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದೆ, ಫಲಾಫೇಕ್ಷೆ ಇಲ್ಲದೆ ಸುಕುಮಾರ್‌ ಮೋಹನ್‌ ಮಾಡುವ ಸೇವೆಯಿಂದ ಮತ್ತಷ್ಟು ಪರಿಪೂರ್ಣತೆಯಿಂದ ಬೆಳಗುತ್ತಿದೆ, ನಾವು ಕ್ಷೇತ್ರದ ಜೊತೆಗೆ ಇದ್ದೇವೆ ಎಂದು ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಭಾನುವಾರ ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರದಲ್ಲಿ ಅಕ್ಟೋಬರ್‌ 22 ರ ತನಕ ನಡೆಯುವ 26ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದಿನಿಂದಲೂ ನಿತ್ಯವೂ ನಾವು ಮಾಧ್ಯಮಗಳಲ್ಲಿ ಕಾಣುವ ಹೆಸರು ಅಂಬಾತನಯ ಮುದ್ರಾಡಿ, ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ, ಶ್ರೀ ಆದಿಶಕ್ತಿ ಕ್ಷೇತ್ರ, ಆ ಮೂಲಕ ಮುದ್ರಾಡಿಯ ಖ್ಯಾತಿಯು ಜಗದೆತ್ತರಕ್ಕೆ ಏರಿದೆ. ಮುದ್ರಾಡಿಗೆ ಹೆಚ್ಚಿನ ಕೀರ್ತಿಯನ್ನು ಸ್ವಾತಂತ್ರ್ಯ ದೊರೆತ ಬಳಿಕ ಅಂಬಾತನಯ ಮುದ್ರಾಡಿ, ಸುಕುಮಾರ್‌ ಮೋಹನ್‌ ಹೆಚ್ಚಿಸಿದ್ದಾರೆ ಎಂದು  ಮುದ್ರಾಡಿ ಮಂಜುನಾಥ ಪೂಜಾರಿ ಅಭಿನಂದಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ ನನಗೂ ಶ್ರೀಕ್ಷೇತ್ರಕ್ಕೂ ವಿಶೇಷ ನಂಟು ಇದೆ. ಧರ್ಮಯೋಗಿ ಮೊಃನ್‌ ಸ್ವಾಮೀಜಿ ಸ್ಥಾಪಿಸಿದ ಶ್ರೀ ಆದಿಶಕ್ತಿ ಕ್ಷೇತ್ರಕ್ಕೆ ಸುಕುಮಾರ್‌ ಮೋಹನ್‌ ಮತ್ತವರ ಕುಟುಂಬ ಸಾಮಾಜಿಕ, ಧಾರ್ಮಿಕ, ರಂಗಭೂಮಿ, ಸಾಂಸ್ಕೃತಿಕ ಟಚ್‌ ನೀಡಿ ಕ್ಷೇತ್ರವನ್ನು ಬೆಳಗಿಸಿದ್ದಾರೆ. ಮುದ್ರಾಡಿ ಕ್ಷೇತ್ರ ನಮ್ಮ ಹೃದಯದಲ್ಲಿದೆ, ಕಠಿಣ ಪರಿಶ್ರಮದ ಮೂಲಕ ಮುದ್ರಾಡಿ ಕ್ಷೇತ್ರ ಮತ್ತು ನಮತುಳುವೆರ್‌ ಕಲಾ ಸಂಘಟನೆಗೆ ರಾಷ್ಟ್ರೀಯ ಮನ್ನಣೆಯನ್ನು ದೊರಕಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

 

ಉಡುಪಿಯ ರಂಗ ನಿರ್ದೇಶಕ ಪ್ರಶಾಂತ್‌ ಉದ್ಯಾವರ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ಅಧ್ಯಕ್ಷರಾದ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಸುಕುಮಾರ್‌ ಮೋಹನ್‌ ಆಶೀರ್ವಚನ ನೀಡಿ ಸರ್ವರನ್ನು ಮಹಾತಾಯಿ ಆದಿಶಕ್ತಿ ಕರುಣಿಸಲಿ, ನಮ್ಮ ಮಹಾತಾಯಿಯ ಸ್ಮರಣೆಗಾಗಿ ದುರ್ಗಾಷ್ಟಮಿ ಪ್ರಯುಕ್ತ 108 ಮುತ್ತೈದಯೆರಿಗೆ ಸೀರೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ತುಮಕೂರು ಯೋಗ ವಿಸ್ಮಯ ಟ್ರಸ್ಟ್‌ನ ಅನಂತ್‌ ಜಿ., ಹೆಗ್ಗದ್ದೆ ಮಾಧ್ಯಮದ ಸಂದೀಪ್‌ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ಕಾಟಿಪಳ್ಳಿ ವಿದ್ಯಾ ಎಸ್‌ ಕರ್ಕೇರ, ನಾಟಿ ವೈದ್ಯ ಡಾ. ರಾಘವೇಂದ್ರ ಹುಳ್ಳೂರು ಕೈಲ್ಕೆರೆ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿಯನ್ನು ಹಾಗೂ ಉಡುಪಿಯ ರಂಗ ನಿರ್ದೇಶಕ ಪ್ರಶಾಂತ್‌ ಉದ್ಯಾವರ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆಯಿಂದ ಗುರುರಾಜ್‌ ಮಾರ್ಪಳ್ಳಿ ರಚಿಸಿ ನಿರ್ದೇಶಿಸಿದ ಅವ್ವ ನನ್ನವ್ವ ನಾಟಕದ ೫೦೦ನೇ ಪ್ರದರ್ಶನ ನಡೆಯಿತು. ನಮ ತುಳುವೆರ್‌ ಕಲಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುಕುಮಾರ್‌ ಮೋಹನ್‌ ಸ್ವಾಗತಿಸಿದರು. ರಚಿತಾ ಕುಲಾಲ್‌ ಕಬ್ಬಿನಾಲೆ ನಿರೂಪಿಸಿ ವಂದಿಸಿದರು.

 

 

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!