ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರದಲ್ಲಿ ಅಕ್ಟೋಬರ್ ೨೨ ರ ತನಕ ನಡೆಯುವ ೨೬ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ ೪೧ನೇ ವರ್ಷದ ಸಂಭ್ರಮದ ೨ನೇ ದಿನದ ಕಾರ್ಯಕ್ರಮ ಸೋಮವಾರ ನಡೆಯಿತು. ರಂಗ ನಿರ್ದೇಶಕ ಉಡುಪಿಯ ರಾಮ್ ಶೆಟ್ಟಿ ಹಾರಾಡಿ ಅಧ್ಯಕ್ಷತೆ ವಹಿಸಿದ್ದರು. ರಂಗನಿರ್ದೇಶಕರಾದ ಜನಪದ ಗಾಯಕ ರಾಜ್ ಗುರು ಹೊಸಕೋಟೆ, ರಚಿತಾ ಕುಲಾಲ್ ಕಬ್ಬಿನಾಲೆ, ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್ ಮೋಹನ್ ಮುಂತಾದವರು ಉಪಸ್ಥಿತರಿದ್ದರು. ಭೂಮಿಕಾ ಹಾರಾಡಿ ಸಂಸ್ಥೆಯ ಅಧ್ಯಕ್ಷ ಆರ್.ಎಂ.ಸಾಮಗ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರವಿ ಎಸ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ರಂಗನಿರ್ದೇಶಕ ಸುಕುಮಾರ್ ಮೋಹನ್ ಮಾತನಾಡಿದರು.
ರಚಿತಾ ಕುಲಾಲ್ ಕಬ್ಬಿನಾಲೆ ನಿರೂಪಿಸಿ ಸ್ವಾಗತಿಸಿದರು. ಭೂಮಿಕ ಹಾರಾಡಿ ತಂಡದಿಂದ ರಾಮ ಶೆಟ್ಟಿ ಹಾರಾಡಿ ರಚಿಸಿ ನಿರ್ದೇಶಿಸಿದ ಸುಯೋಧನ ನಾಟಕ ಪ್ರದರ್ಶನಗೊಂಡಿತು.



