ಬಿದ್ದೂರಿನ ಬಿನ್ಬೆನ್ ನಾಟಕ ಪ್ರದರ್ಶನ.
ರಂಗಪಯಣದಲ್ಲಿ ನಮತುಳುವರ್ ಕಲಾ ಸಂಘಟನೆ : ಅದ್ಭುತ ಸಾಧನೆ – ನಯನ ಸೂಡ.
ಮುದ್ರಾಡಿ : ರಂಗಪಯಣದಲ್ಲಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯು ಅದ್ಭುತ ಸಾಧನೆ ಮಾಡಿದೆ. ಖ್ಯಾತಿಯನ್ನು ಪಡೆದಿದೆ. ರಂಗಭೂಮಿಯಲ್ಲಿ ಇನ್ನಷ್ಟು ಸಾದನೆಯನ್ನು ಮಾಡುವಂತಾಗಲಿ ಎಂದು ರಂಗ ನಿರ್ದೇಶಕಿ ನಯನ ಸೂಡ ಹೇಳಿದರು.
ಅವರು ಮಂಗಳವಾರ ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಅಕ್ಟೋಬರ್ ೨೨ ರ ತನಕ ನಡೆಯುವ 26ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮದ ೩ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಂಗನಟ ಜ್ಯೋತಿಷಿ ಸುಧೀಂದ್ರ ಮೋಹನ್ ಮಾತನಾಡಿ ನಮ ತುಳುವೆರ್ ಕಲಾ ಸಂಘಟನೆ ಇನ್ನಷ್ಟು ಪ್ರಖ್ಯಾತಿ ಪಡೆಯಲಿ ಎಂದು ಆಶಿಸಿದರು. ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆ ಮತ್ತು ಆದಿಶಕ್ತಿ ಕ್ಷೇತ್ರದಲ್ಲಿ ೫೦ ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಸದಾನಂದ ದಾರೆಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ರಂಗನಿರ್ದೇಶಕ ಸುಕುಮಾರ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟರಮಣ ಪುತ್ರಾಯ, ಪ್ರಕಾಶ್ ಮುದ್ರಾಡಿ, ರಾಘವ ಸಿ ಅಂಚನ್ ಉಚ್ಚಿಲ, ರಚಿತಾ ಕುಲಾಲ್ ಕಬ್ಬಿನಾಲೆ, ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್ ಮೋಹನ್ ಮುಂತಾದವರು ಉಪಸ್ಥಿತರಿದ್ದರು. ರಚಿತಾ ಕುಲಾಲ್ ಕಬ್ಬಿನಾಲೆ ನಿರೂಪಿಸಿ ಸ್ವಾಗತಿಸಿದರು.
…
ಬಿದ್ದೂರಿನ ಬಿನ್ಬೆನ್ ನಾಟಕ ಪ್ರದರ್ಶನ.

ಹೆಬ್ರಿಯ ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಅಕ್ಟೋಬರ್ ೨೨ ರ ತನಕ ನಡೆಯುವ 26ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮದ ೩ನೇ ದಿನ ಮಂಗಳವಾರ ರಂಗಪಯಣ ತಂಡದಿಂದ ರಂಗ ನಿರ್ದೇಶಕಿ ನಯನ ಸೂಡ ರಚಿಸಿ ನಿರ್ದೇಶಿಸಿದ ಬಿದ್ದೂರಿನ ಬಿನ್ಬೆನ್ ನಾಟಕ ಪ್ರದರ್ಶನಗೊಂಡಿತು.




