ಹೆಬ್ರಿ : ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಸರ್ಕಾರಿ ಬಸ್ಸೊಂದು ಕೆಲಕಾಲ ತಿರುವಿನಲ್ಲಿ ಸ್ಥಗಿತಗೊಂಡು ನಿಂತ ಘಟನೆ ಭಾನುವಾರ ನಡೆದಿದೆ. ಚಾಲಕನು ಗೇರು ಬದಲಿಸುವಾಗ ಗೊಂದಲಕ್ಕೀಡಾಗಿ ಅಪಾಯಕಾರಿ ತಿರುವಿನಲ್ಲಿ ಬಸ್ ನಿಂತಿತು. ನಂತರ ಪ್ರಯಾಣಿಕರನ್ನು ಕೆಳಗಿಳಿಸಿ ಬಸನ್ನು ಮುಂದಕ್ಕೆ ಚಲಾಯಿಸಲಾಯಿತು. ಘಟನೆಯಿಂದಾಗಿ ಭಾನುವಾರ ವಾದ ಹಿನ್ನೆಲೆಯಲ್ಲಿ ಸಾಲುಗಟ್ಟಿ ವಾಹನಗಳು ಘಾಟಿಯಲ್ಲಿ ನಿಂತಿದ್ದವು. ಕೆಲಕಾಲ ಸಂಚಾರಕ್ಕೆ ಸಮಸ್ಯೆಯಾಗಿತ್ತು.



