ಕನ್ನಡ ರಾಜ್ಯೋತ್ಸವ ಆಚರಣೆ – ಅಕ್ಷರ ಸಾಹಿತ್ಯ ಸಂಭ್ರಮ.
ಹೆಬ್ರಿ : ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ‘ಅಕ್ಷರ ಸಾಹಿತ್ಯ ಸಂಘ’ದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಅಕ್ಷರ ಸಾಹಿತ್ಯ ಸಂಭ್ರಮವು ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪೆರ್ಡೂರು, ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲ್ಲೂಕು ಘಟಕ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹೆಬ್ರಿ, ಜೇಸಿಐ ಹೆಬ್ರಿ ಸಹಯೋಗದೊಂದಿಗೆ ಶುಕ್ರವಾರ ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜರುಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ವಹಿಸಿದ್ದರು. ಸರ್ಕಾರಿ ಪ್ರೌಢಶಾಲೆ ಬೀಜಾಡಿಯ ಕನ್ನಡ ಭಾಷಾ ಶಿಕ್ಷಕಿ ಅರ್ಪಣಾ ಬಾಯಿ ಕೆ. ಕನ್ನಡ ನಾಡು ನುಡಿಯ ಮಹತ್ವದ ಕುರಿತು ಉಪನ್ಯಾಸ ಮಾಡಿ ಅತ್ಯಂತ ಪ್ರಾಚೀನವಾದ ಭಾಷೆ ಕನ್ನಡ. ಸಮೃದ್ಧವಾದ ಭಾಷೆ ಕನ್ನಡ. ಪಂಡಿತರು ಮತ್ತು ಜನಪದರ ಭಾಷೆ ಕನ್ನಡ. ನಮ್ಮ ಭಾಷೆಯನ್ನು ಪ್ರೀತಿಸಬೇಕು. ಪರಭಾಷೆಯನ್ನು ದ್ವೇಷಿಸುವುದಲ್ಲ ಎಂದರು.
ಸಂಪನ್ಮೂಲ ವ್ಯಕ್ತಿ ಸರಕಾರಿ ಪ್ರೌಢಶಾಲೆ, ಬೀಜಾಡಿಯ ಶಿಕ್ಷಕಿ ಅರ್ಪಣಾ ಬಾಯಿ ಕೆ. ಅವರನ್ನು ಅಭಿನಂದಿಸಲಾಯಿತು.

ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಶೆಟ್ಟಿ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹೆಬ್ರಿ ಅಧ್ಯಕ್ಷ ಸುದೀಪ ಭಟ್, ಜೇಸಿಐ ಹೆಬ್ರಿ ಅಧ್ಯಕ್ಷ ಸತೀಶ್ ಕುಲಾಲ್, ಲಯನ್ಸ್ ಕ್ಲಬ್ ನ ಟಿ.ಜಿ ಆಚಾರ್ಯ, ರಘುರಾಮ ಶೆಟ್ಟಿ, ನಾಗೇಶ ನಾಯಕ್, ಹಿರಿಯ ಶಿಕ್ಷಕ ವೆಂಕಟರಮಣ ಕಲ್ಕೂರ್, ಅಕ್ಷರ ಸಾಹಿತ್ಯ ಸಂಘದ ಅಧ್ಯಕ್ಷ ಸಿಂಚನಾ ಉಪಸ್ಥಿತರಿದ್ದರು.
ಅಕ್ಷರ ಸಾಹಿತ್ಯ ಸಂಘದ ಸಂಚಾಲಕ ಮಂಜುನಾಥ ಕುಲಾಲ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಹಿಂದಿ ಭಾಷಾ ಶಿಕ್ಷಕ ಸುಧೀಂದ್ರ ನಾಯಕ್ ವಂದಿಸಿದರು. ಕನ್ನಡ ಭಾಷಾ ಶಿಕ್ಷಕ ಸಂಗೀತಾ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಇಂಚನಾ, ಸಾನಿಕಾ, ಸಾನಿಕಾ ಪೂಜಾರಿ, ಮಾನ್ವಿತಾ, ವೀಕ್ಷಾ ಮತ್ತು ಅನ್ ಮರಿಯಾ ನಿರೂಪಿಸಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಆಕರ್ಷಕ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು.



