Saturday, November 7, 2026
Homeಹೆಬ್ರಿ ನ್ಯೂಸ್ ವಿಶೇಷಸಾಂಪ್ರದಾಯಿಕ ಸಡಗರದೊಂದಿಗೆ ದೀಪಾವಳಿ ಆಚರಣೆ: ಕಳೆಗಟ್ಟಿದ ಹಂಡೆ ನೀರು ತುಂಬುವ ಶಾಸ್ತ್ರ, ತುಳಸಿ ಹಾಗೂ ಗೋಪೂಜೆ

ಸಾಂಪ್ರದಾಯಿಕ ಸಡಗರದೊಂದಿಗೆ ದೀಪಾವಳಿ ಆಚರಣೆ: ಕಳೆಗಟ್ಟಿದ ಹಂಡೆ ನೀರು ತುಂಬುವ ಶಾಸ್ತ್ರ, ತುಳಸಿ ಹಾಗೂ ಗೋಪೂಜೆ

 ಬ್ರಹ್ಮಾವರ: ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಹಿಳಾ ಶಿಕ್ಷಕಿಯರ ಬಳಗ ಒಗ್ಗೂಡಿ ಅತ್ಯಂತ ಸಂಭ್ರಮ ಮತ್ತು ಸಾಂಪ್ರದಾಯಿಕ ವೈಭವದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು.
ಆಶಾಲತಾ ಅವರ ಗೃಹದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಸೌಹಾರ್ದ ಕೂಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಹಾಗೂ ಕೆ. ದಿನಕರ ಶೆಟ್ಟಿ ಅಂಪಾರು ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ನಾಡು-ನುಡಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ನಡೆದ ಈ ಆಚರಣೆಯಲ್ಲಿ ಮಹಿಳಾ ಶಿಕ್ಷಕಿಯರೆಲ್ಲರೂ ಸಾಂಪ್ರದಾಯಿಕ ಉಡುಗೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದರು.
ಹಬ್ಬದ ಮೂಲ ಪರಂಪರೆಯಂತೆ ಹಂಡೆಗೆ ನೀರು ತುಂಬಿ, ಹೂವುಗಳಿಂದ ಅಲಂಕರಿಸಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಅದರೊಂದಿಗೆ ಮಂಗಳಕರವಾದ ತುಳಸಿ ಪೂಜೆ ಹಾಗೂ ಗೋಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿ, ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬದ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲಾಯಿತು.
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಅನೇಕ ಮಹಿಳಾ ಶಿಕ್ಷಕಿಯರು ಉಪಸ್ಥಿತರಿದ್ದು ಹಬ್ಬದ ಸಡಗರವನ್ನು ಹಂಚಿಕೊಂಡರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!