ಅಜೆಕಾರು : ಮರ್ಣೆ ಗ್ರಾಮ ಪಂಚಾಯತಿಯ ಅಜೆಕಾರಿನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗಾಗಿ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರುಡ್ ಸೆಟ್ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್, ಅಜೆಕಾರು ಮರ್ಣೆ ಗ್ರಾಮ ಪಂಚಾಯತಿ ಸಹಯೋಗದಲ್ಲಿ ನಡೆಯಿತು.
ಕೃತಕ ಆಭರಣಗಳ ತಯಾರಿಕೆ, ಸೌಂಧರ್ಯವರ್ಧಕ ಸೇವೆಗಳು, ಕೇಶ ವಿನ್ಯಾಸ, ಕೇಶಾಲಂಕಾರ, ಸೀರೆ ಉಡಿಸುವ ಕಲೆ ಸೇರಿದಂತೆ ವಿವಿಧ ಸ್ವಉದ್ಯೋಗ ಕೌಶಲ್ಯಗಳ ಬಗ್ಗೆ ಸಮಗ್ರ ತರಬೇತಿ ನೀಡಲಾಯಿತು. ಕನ್ನಿಕಾ ಪಂಡಿತ್, ಸಂತೋಷ್ ಶೆಟ್ಟಿ, ಅಂಕಿತ ನಾಯಕ್ ಉಪಸ್ಥಿತರಿದ್ದರು.


