Sunday, August 9, 2026
Homeಚಾರ ಗ್ರಾಮ ಪಂಚಾಯತ್‌ಚಾರ : ಸೀತಾನದಿಯಲ್ಲಿ ಕಳೆದ ವರ್ಷ ಕೊಚ್ಚಿ ಹೋಗಿದ್ದ ಬಾವಿ ಮರು ನಿರ್ಮಾಣ.

ಚಾರ : ಸೀತಾನದಿಯಲ್ಲಿ ಕಳೆದ ವರ್ಷ ಕೊಚ್ಚಿ ಹೋಗಿದ್ದ ಬಾವಿ ಮರು ನಿರ್ಮಾಣ.

ಹೆಬ್ರಿ ನ್ಯೂಸ್‌

ಚಾರ ( ಹೆಬ್ರಿ ) : ಚಾರ ಜವಾಹರ ನವೋದಯ ವಿದ್ಯಾಲಯದ ಬಳಿ ಸೀತಾನದಿಯಲ್ಲಿ ಇದ್ದ ಬಾವಿಯೊಂದು ಕಳೆದ ವರ್ಷ ಕೊಚ್ಚಿ ಹೋಗಿದ್ದು, ಅದನ್ನು ಮರು ನಿರ್ಮಾಣ ಮಾಡಿ ಕುಚ್ಚೂರು ಗ್ರಾಮ ಪಂಚಾಯಿತಿ ಬಳಕೆ ಮಾಡುತ್ತಿದೆ.

ವಾರಾಹಿ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್  ಕೆಲಸದಿಂದಾಗಿ ಸೀತಾ ನದಿಯಲ್ಲಿ ಇದ್ದ ಬಾವಿ ಕಳೆದ ವರ್ಷದ ಮಳೆಗಾಲದಲ್ಲಿ ಕೊಚ್ಚಿಹೋಗಿತ್ತು. ಬೇಸಿಗೆ ಸಂದರ್ಭದಲ್ಲಿ  ಬೇಳಂಜೆಗೆ ಈ ಬಾವಿಯ ಮೂಲಕ ನೀರಿನ  ಸರಬರಾಜು ಮಾಡಲಾಗುತ್ತಿತ್ತು. ಸುಮಾರು ಒಂದುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಯ ಗುತ್ತಿಗೆದಾರರು ಬಾವಿಯನ್ನು ಮರು ನಿರ್ಮಿಸಿ ಕೊಟ್ಟಿದ್ದಾರೆ.

…………

ಕಳೆದ ವರ್ಷದ ಮಳೆಗಾಳದಲ್ಲಿ ಪೈಪ್ ಲೈನ್ ಕಾಮಗಾರಿಯಿಂದ ಸೀತಾ ನದಿಯಲ್ಲಿ ಇದ್ದ ನಮ್ಮ ಬಾವಿ ಕೊಚ್ಚಿಹೋಗಿತ್ತು. ನಿರಂತರ ಮಾತುಕತೆಯ ಮೂಲಕ ಗುತ್ತಿಗೆದಾರರು ಬಾವಿಯನ್ನು ಮರು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬೇಳಂಜೆಗೆ ಬೇಸಿಗೆ ಕಾಲದಲ್ಲಿ  ಇಲ್ಲಿಂದಲೆ ನೀರನ್ನು ಪೂರೈಕೆ ಮಾಡುತ್ತೇವೆ.

– ರಿತೇಶ್ ಪುತ್ರನ್, ಪಿಡಿಇ, ಕುಚ್ಚೂರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments