ಕೊರಗ ಸುಮುದಾಯ ಅಭಿವೃದ್ಧಿಗಾಗಿ ಮಲ್ಟಿ ಪರ್ಪಸ್ ಸೆಂಟರ್ : ಕೋಟ ಶ್ರೀನಿವಾಸ ಪೂಜಾರಿ.
ಬೆಳ್ವೆ : ಕೇಂದ್ರ ಸರ್ಕಾರದ ಪಿಎಂ ಜನ್ಮನ್ ಯೋಜನೆಯಡಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಲ್ಟಿ ಪರ್ಪಸ್ ಸೆಂಟರ್ ಕೊರಗ ಸಮುದಾಯಗಳ ಬೆಳವಣಿಗೆಗೆ ಮಹತ್ವ ನೀಡುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ. ಬುಡಕಟ್ಟು ಕೊರಗ ಸಮುದಾಯದ 11 ಕುಟುಂಬಗಳಿಗೆ ಪ್ರಯೋಜವಾಗಲಿದೆ. ಅಭಿವೃದ್ಧಿ, ಆರೋಗ್ಯ ಹಾಗೂ ಇನ್ನೀತರ ಹಲವು ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಬೆಳ್ವೆಯಲ್ಲಿ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರ ಮುತುವರ್ಜಿಯಲ್ಲಿ ನಿರ್ಮಿಸಲಾದ ಕಟ್ಟಡವು ಉತ್ತಮ ಗುಣ ಮಟ್ಟ ಹಾಗೂ ವ್ಯವಸ್ಥೆಗಳೊಂದಿಗೆ ನಿರ್ಮಿಸಿರುವ ಕಾರ್ಯ ಪ್ರಶಂಸನೀಯ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೋಮವಾರ ಅವರು ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಉಡುಪಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಪಿಎಂ ಜನ್ಮನ್ ಯೋಜನೆ ಅಡಿಯಲ್ಲಿ ಬೆಳ್ವೆ ಗ್ರಾಮದ ದೇವಸ್ಥಾನಬೆಟ್ಟು ಕೊರಗ ಕಾಲೋನಿಯಲ್ಲಿ ನಿರ್ಮಿಸಲಾದ ಮಲ್ಟಿ ಪರ್ಪಸ್ ಸೆಂಟರ್ ನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಸುಮಾರು 10.50 ಕೋಟಿ ರೂ.ವ್ಯಚ್ಚದಲ್ಲಿ 18 ಕಡೆಗಳಲ್ಲಿ ಇತಂಹ ಕಟ್ಟಡಗಳು ನಿರ್ಮಿಸಲಾಗುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಬುಡಕಟ್ಟು ಕೊರಗ ಸಮುದಾಯಕ್ಕೆ ಮೂಲ ಸೌಕರ್ಯ ಹಾಗೂ ಇನ್ನೀತರ ಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಪಂದಿಸುತ್ತೆನೆ ಎಂದು ಹೇಳಿದರು.
ಶಾಸಕ ಕಿರಣ್‌ಕುಮಾರ್ ಕೊಡ್ಗಿ, ಹೆಬ್ರಿ ತಾಲ್ಲೂಕು ಪ್ರಭಾರ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ನಿರ್ವಾಹಣಾಧಿಕಾರಿ ಪ್ರಶಾಂತ್ ರಾವ್, ಬೆಳ್ವೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಶೆಟ್ಟಿ ಸುರ‍್ಗೋಳಿ, ಆಡಳಿತಾಧಿಕಾರಿ ಚಿದಾನಂದ್, ಪಂಚಾಯತಿ ಅಭಿವೃದ್ದಿ ಅಧಿಕಾರಿ ಸತೀಶ್ ನಾಯ್ಕ, ಕೊರಗ ಸಮುದಾಯದ ಮುಖಂಡ ಕುಮಾರದಾಸ್ ಹಾಲಾಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರುಗಳು, ವಿವಿಧ ಇಲಾಖೆಯ ಇಲಾಖಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಲ್ಲರೂ ಕೊರಗ ಕಾಲೋನಿಯಲ್ಲಿ ‘ತಾಯಿಗಾಗಿ ಒಂದು ಗಿಡ’ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಸಿ ನೆಟ್ಟರು.


