Saturday, August 8, 2026
Homeಬೆಳ್ವೆ ಗ್ರಾಮ ಪಂಚಾಯತ್‌ಬೆಳ್ವೆ - ಯಳಂತೂರು : ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬೆಳ್ವೆ – ಯಳಂತೂರು : ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬೆಳ್ವೆ : ಬೆಳ್ವೆ ಸಮೀಪದ ಯಳಂತೂರು ಪುರಾಣ ಪ್ರಸಿದ್ದ ನೂತನ ಶಿಲಾಮಯ ಗರ್ಭಗುಡಿಯೊಂದಿಗೆ ಜೀರ್ಣೋದ್ಧಾರ ಗೊಂಡ ಸಪರಿವಾರ ಶ್ರೀಗೋಪಾಲಕೃಷ್ಣ ದೇವಳದಲ್ಲಿ ಜೀರ್ಣೋದ್ಧಾರ ಪೂರ್ವಕ ಅಷ್ಟಬಂಧ ಪ್ರತಿಷ್ಠಾಪನಾ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ನಡೆಯಿತು. ಪ್ರಾಯಶ್ಚಿತ್ತ ಪವಮಾನ ಹೋಮ,ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ,ಮಹಾಪೂಜೆ,ಪ್ರಸಾದ ವಿತರಣೆ, ಮಧ್ಯಾಹ್ನ ಹುಯ್ಯಾರು ಗೋಪಾಲಕೃಷ್ಣ ಶೆಟ್ಟಿ (ಜಿ.ಕೆ.ಶೆಟ್ಟಿ) ಬೆಂಗಳೂರು ಸ್ವಾತಿ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಇವರಿಂದ ಮಹಾ ಅನ್ನಸಂತರ್ಪಣೆ ಸೇವೆ,ಸಂಜೆ ರಂಗಪೂಜೆ ಸೇವೆ ನಡೆಯಿತು.ಆಡಳಿತ ಮಂಡಳಿಯವರು,ಜೀಣೋದ್ಧಾರ ಸಮಿತಿಯವರು,ಅರ್ಚಕ ವೃಂದವರು,ಊರ ಪರವೂರ ಭಕ್ತಾಧಿಗಳು ಪಾಲ್ಗೋಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments