Sunday, August 9, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಶೆಲ್ ಎನ್ನೆಕ್ಸಪ್ಲೋರಲ್ ಕಾರ್ಯಾಗಾರ ಸಮಾರೋಪ - ಪ್ರಮಾಣಪತ್ರ ವಿತರಣೆ

ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಶೆಲ್ ಎನ್ನೆಕ್ಸಪ್ಲೋರಲ್ ಕಾರ್ಯಾಗಾರ ಸಮಾರೋಪ – ಪ್ರಮಾಣಪತ್ರ ವಿತರಣೆ

ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೆಲ್ ಎನ್ನೆಕ್ಸಪ್ಲೋರಲ್ ಅಸಿಸ್ಟೆಂಟ್ ಮ್ಯಾನೇಜರ್ ಪಲ್ಲವಿ ಅವರಿಂದ ವೈಜ್ಞಾನಿಕ ಮನೋಭಾವ ಮತ್ತು ಸೃಜನಾತ್ಮಕತೆಯನ್ನು ಬೆಳೆಸಿಕೊಳ್ಳುವ ೨ ದಿನಗಳ ಕಾರ್ಯಾಗಾರವನ್ನು ಸಂಸ್ಥೆಯಲ್ಲಿ ನಡೆಸಿದರು. ನೀರು, ವಿದ್ಯುತ್ ಇತ್ಯಾದಿ ಅಗತ್ಯ ವಸ್ತುಗಳ ನಿರ್ವಹಣೆ, ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ ಅದರಿಂದ ಹೊಸ ಆಕರ್ಷಕ ವಸ್ತುಗಳ ತಯಾರಿಕೆ ಬಗ್ಗೆ ತರಬೇತಿ ನೀಡಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ‌ಶಿಕ್ಷಕಿಯರಾದ ಅಪರ್ಣಾ ಆಚಾರ್, ಶಕುಂತಲಾ, ಅಟಲ್ ಟಿಂಕರಿಂಗ್ ಲ್ಯಾಬ್ ಮೇಲ್ವಿಚಾರಕಿ ಸುಚಿತ್ರಾ, ಸಂಸ್ಥೆಯ ಶಿಕ್ಷಕಿ ಪ್ರತಿಮಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿ ತರಬೇತಿಯಿಂದ ನಾವೆಲ್ಲರೂ ಉತ್ತಮ ವಿಚಾರಗಳನ್ನು ತಿಳಿದು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಿದೆ ಎಂದರು.

ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments