Monday, August 10, 2026
HomeUncategorizedಗೋಪಾಲ ಭಂಡಾರಿ ಅವರ 75ನೇ ಜನ್ಮದಿನಕ್ಕೆ ಗೆಳೆಯ ಸಹಪಾಠಿ ಸಾಹಿತಿ ಹರಿದಾಸ ಬಿ.ಸಿ . ರಾವ್...

ಗೋಪಾಲ ಭಂಡಾರಿ ಅವರ 75ನೇ ಜನ್ಮದಿನಕ್ಕೆ ಗೆಳೆಯ ಸಹಪಾಠಿ ಸಾಹಿತಿ ಹರಿದಾಸ ಬಿ.ಸಿ . ರಾವ್ ಶಿವಪುರ ಅವರ ಕವನ ನಮನ.

ಗೆಳೆತನದ ಪುಟದಲ್ಲಿ ಶಾಶ್ವತವಾದವನು.
ಭಾವನೆಗಳ ಮೂಲಕ ಎನ್ನ ಹೃದಯಸ್ಥನಾದವನು.
ಎಂದೆಂದೂ ಬಾಡದ ನಗು ಮುಖದ ಸರದಾರನಾದವನು.
ನನ್ನ ಬಾಳೊಳು ‌ಸಖ್ಯದ ಸುಖ ನೀಡಿ ಮಿಂಚಿದವನು..//.೧ //

ಜೀವಯಾನದಲಿ ತಂಪು ಬರೆದವನು.
ಆಕಾಶ ಧರಣಿಯಂತೆ ‌ ಸೌಖ್ಯ ಬೆಸೆದವನು.
ಕೋಪ ತಾಪವಿಲ್ಲದ ಸಹನಾಮೂರ್ತಿ ಇವನು.
‌ಸುಮ್ಮನೆ ಎಂದೂ ಕೂರದ ಜನನಾಯಕನಾಗಿದ್ದವನು.// ೨//

ಕಾಯ ಅಳಿದರೂ ನಿತ್ಯ ನೆನಪಾಗುವವನು.
ನನ್ನ ದು:ಖ ದುಮ್ಮಾನದಲಿ ಬೆಳಕು ಹಿಡಿದವನು.
ಜನುಮ ಜನುಮದ ಋಣ ತೀರಿಸಲಾಗದವನು..
ನನ್ನ ಪಾಲಿಗೆ ಎಂದೆಂದೂ ಮರೆಯಲಾಗದ ಪುಣ್ಯಾತ್ಮನು.// ೩//

ನನ್ನ ವ್ಯಕ್ತಿತ್ವ ವಿಕಸನದ ಪರಿಯ ಕೊಂಡಾಡಿದವನು.
ಮರೆಯಲಾರೆನು ಗೆಳೆಯ ನನ್ನ ಬಾಳಿನ ಕೊನೆಯವರೆಗೂ.//.೪//

🙏75 ನೇ ಜನ್ಮದಿನಕಿದು ಅರ್ಪಿತ 🙏

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments