ಹೆಬ್ರಿ: ಬ್ರಹ್ಮಾವರದ ಚಾಂತಾರು ನಿವಾಸಿ ಪ್ರವೀಣ್ ಪುತ್ರಾಯ ( ಪ್ರವೀಣ್ ಮುದ್ದೂರು ) ಹೆಬ್ರಿಯಿಂದ ಚಾಂತಾರು ತನ್ನ ಮನೆ ಕಡೆಗೆ ಹೆಬ್ರಿ ಬ್ರಹ್ಮಾವರ ಮುಖ್ಯ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಕಳತ್ತೂರು ಶಾಲೆ ಬಳಿ ಶನಿವಾರ ಮಧ್ಯಾಹ್ನ ಸುಮಾರು 12:45 ಗಂಟೆಗೆ ತಲುಪುವಾಗ ಬ್ರಹ್ಮಾವರ ಕಡೆಯಿಂದ ಹೆಬ್ರಿ ಕಡೆಗೆ KA-06 MA-5097 ನೇ ಕಾರನ್ನು ಅದರ ಚಾಲಕ ಶಿವರಾಜ್ ಎಂಬವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪ್ರವೀಣ್ ಚಲಾಯಿಸುತ್ತಿದ್ದ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಪರಿಣಾಮ ಪ್ರವೀಣ್ ಚಲಾಯಿಸುತ್ತಿದ್ದ ಕಾರು ಭಾರಿ ಜಖಂಗೊಂಡಿದೆ. ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2026 ಕಲಂ: 281 BNS ರಂತೆ ಪ್ರಕರಣ ದಾಖಲಾಗಿರುತ್ತದೆ.


