Saturday, August 8, 2026
Homeಹೆಬ್ರಿಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಉಳಿಸಿ ಬೃಹತ್‌ ಅಭಿಯಾನ. ಮೆರವಣಿಗೆಯಲ್ಲಿ ತೆರಳಿ ಭಕ್ತ ಸಮೂಹ ಹೆಬ್ರಿ...

ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಉಳಿಸಿ ಬೃಹತ್‌ ಅಭಿಯಾನ. ಮೆರವಣಿಗೆಯಲ್ಲಿ ತೆರಳಿ ಭಕ್ತ ಸಮೂಹ ಹೆಬ್ರಿ ತಾಲ್ಲೂಕು ಆಡಳಿತಕ್ಕೆ ಮನವಿ.

ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಉಳಿಸಿ ಬೃಹತ್‌ ಅಭಿಯಾನ.
ಮೆರವಣಿಗೆಯಲ್ಲಿ ತೆರಳಿ ಭಕ್ತ ಸಮೂಹ ಹೆಬ್ರಿ ತಾಲ್ಲೂಕು ಆಡಳಿತಕ್ಕೆ ಮನವಿ.

ಹೆಬ್ರಿ : ಹೆಬ್ರಿಯಲ್ಲಿ ಹಾದು ಹೋಗುವ 169- A ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗಾಗಿ ಪಕ್ಕದಲ್ಲಿರುವ ಪ್ರಸಿದ್ಧ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾಗವು ಹೋಗಲಿದ್ದು ಅನಂತಪದ್ಮನಾಭ ದೇವಾಲಯದ ವಾಸ್ತುವಿಗೆ ಯಾವುದೇ ತೊಂದರೆಯಾಗದಂತೆ ” ದೇವಸ್ಥಾನವನ್ನು ಉಳಿಸಿ ” ಎಂಬ ಘೋಷಣೆಯೊಂದಿಗೆ ನೂರಾರು ಮಂದಿ ಭಕ್ತರು ಹೆಬ್ರಿ ತಾಲ್ಲೂಕು ಆಡಳಿತಕ್ಕೆ ಗುರುವಾರ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.

ದೇವಸ್ಥಾನದಲ್ಲಿ ಸೇರಿದ ನೂರಾರು ಮಂದಿ ಭಕ್ತರು ಆಡಳಿತ ಮೋಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್‌ ನೇತ್ರತ್ವದಲ್ಲಿ ಸಲ್ಲಿಸಿದ ಮನವಿಯನ್ನು ಉಪ ತಹಶೀಲ್ಧಾರ್‌ ರಾಘವೇಂದ್ರ ನಾಯ್ಕ್‌ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನವಿ ಪತ್ರಗಳನ್ನು ಪರಿವಾಣದಲ್ಲಿಟ್ಟು ಪ್ರಸಾದದ ಜೊತೆಗೆ ತಾಲ್ಲೂಕು ಆಡಳಿತದ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ಭಕ್ತ ಸಮೂಹ ಭಜನೆ ಮಾಡಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. ಹೆಬ್ರಿಯ ಪ್ರಮುಖರು, ಗಣ್ಯರು ಹಾಜರಿದ್ದರು.ದೇವಸ್ಥಾನ ಉಳಿಸಿ ಹೋರಾಟಕ್ಕೆ ಕೈಜೋಡಿಸಿದ ಭಕ್ತ ಸಮೂಹಕ್ಕೆ ಆಡಳಿತ ಮೋಕ್ತೇಸರ ತಾರನಾಥ ಬಲ್ಲಾಳ್‌ ಕೃತಜ್ಞತೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments