ಹೆಬ್ರಿ : ಹೆಬ್ರಿ ಅಮೃತ ಭಾರತಿ ವಿದ್ಯಾ ಕೇಂದ್ರದ ಅನ್ನಪೂರ್ಣ ಸಭಾಂಗಣದಲ್ಲಿ ಸೋಮವಾರ “ಆಟಿ ತಿಂಗಳ ವೈಭವ” ವಿಶೇಷ ಖಾದ್ಯಗಳ ಅಮೃತಾನುಭವ ನಡೆಯಿತು.
6 ರಿಂದ 10ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಅವರ ಪೋಷಕರ ಸಹಾಯದಿಂದ ಆಟಿ ತಿಂಗಳ ವಿವಿಧ ರೀತಿಯ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿ ಶಾಲೆಗೆ ತಂದು ಹಂಚಿ ಸಂಭ್ರಮ ಪಟ್ಟರು. “ಆಟಿ ತಿಂಗಳ ವೈಭವ” ವಿಶೇಷ ಖಾದ್ಯಗಳ ಅಮೃತಾನುಭವದಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಗುರುದಾಸ್ ಶೆಣೈ, ಪಾಂಡುರಂಗ ರಮಣ ನಾಯಕ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ್ ನಾಯಕ್, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟ್ ನ ಹಿರಿಯರಾದ ಬಾಲಕೃಷ್ಣ ಮಲ್ಯ, ಟ್ರಸ್ಟ್ ಸದಸ್ಯ ವಿಷ್ಣುಮೂರ್ತಿ ನಾಯಕ್, ವಸತಿ ನಿಲಯದ ಕಮಿಟಿಯ ಸದಸ್ಯ ರಾಮಕೃಷ್ಣ ಆಚಾರ್ ಖಾದ್ಯಗಳನ್ನು ಸವಿದು ,ವಿದ್ಯಾರ್ಥಿಗಳ ಕೈ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಂಸ್ಥೆಯ ಪ್ರಾಂಶುಪಾಲ ಅರುಣ್ ಉಪಸ್ಥಿತರಿದ್ದರು.



