ಹೆಬ್ರಿ : ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀ ಅನಂತಪದ್ಮನಾಭ ದೇವರಿಗೆ ಗಣೇಶ ಚತುರ್ಥಿಯ ಪರ್ವಕಾಲದಲ್ಲಿ ಹೆಬ್ರಿ ಕೆರೆದಂಡೆ ರುಕ್ಮಿಣಿ ನಾಯಕ್ ದೇವು ನಾಯಕ್ ಅವರ ಪುತ್ರ ಹರಿಪ್ರಸಾದ್ ನಾಯಕ್ ಹಾಗೂ ಸೊಸೆ ಶ್ರೀಲಕ್ಷ್ಮಿ ನಾಯಕ್ 56.890 ಗ್ರಾಂ ತೂಕದ 8.6 ಲಕ್ಷ ಬೆಲೆಯ 22 ಕ್ಯಾರೆಟ್ ಶುದ್ಧ ಚಿನ್ನದ ಕಣ್ಣು ಕಂಗಳ ಹಾಗೂ ಕರ್ಣ ಕುಂಡಲ ಆಭರಣಗಳನ್ನು ದೇವರಿಗೆ ಸಮರ್ಪಿಸಿದ್ದಾರೆ. ರುಕ್ಮಿಣಿ ನಾಯಕ್ ದೇವು ನಾಯಕ್ ಅವರನ್ನು ಕ್ಷೇತ್ರದ ಆಡಳಿತ ಮೋಕ್ತೇಸರ ಎಚ್. ತಾರಾನಾಥ ಬಲ್ಲಾಳ್ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.




