ಪಡುಕುಡೂರು ( ಮುನಿಯಾಲು ) : ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಸಮಾಲೋಚನಾ ಸಭೆಯು ಇತ್ತೀಚೆಗೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಪಟೇಲರ ಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶತಮಾನೋತ್ಸವವನ್ನು ಆಚರಿಸಲು ಶಾಲೆಯಲ್ಲಿ ವಿವಿದ್ದೋದ್ದೇಶದ ಸಭಾಭವನ ನಿರ್ಮಾಣ, ಗಾರ್ಡನ್ ಮತ್ತು ಸಕಲ ವ್ಯವಸ್ಥೆಯನ್ನು ಮಾಡುವ ಬಗ್ಗೆ ಚರ್ಚಿಸಲಾಯಿತು. ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಶತಮಾನೋತ್ಸವ ಸಮಿತಿ, ಪೋಷಕರು, ಹಳೇವಿದ್ಯಾರ್ಥಿಗಳ ವಿಶೇಷ ಪ್ರಯತ್ನದಿಂದ ಗ್ರಾಮೀಣ ಪ್ರದೇಶವಾದ ಪಡುಕುಡೂರು ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ಹೆಚ್ಚಾಗಿದ್ದು ಶಾಲೆಯಲ್ಲಿ 84 ಮಕ್ಕಳು ಹಾಗೂ ನರ್ಸರಿ ಮತ್ತು ಅಂಗನವಾಡಿಯಲ್ಲಿ 17 ಮಕ್ಕಳು ಸೇರಿ 101 ಮಕ್ಕಳು ಕಲಿಯುತ್ತಿದ್ದಾರೆ ಎಂದು ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್ ತಿಳಿಸಿದರು.
ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ಹೆಚ್ಚಾಗಲು ಶ್ರಮಿಸಿದ ಸರ್ವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಇದೇ ಡಿಸೆಂಬರ್ ಡಿಸೆಂಬರ್19 ಮತ್ತು ೨೦ ರಂದು ಕ್ರೀಡಾಕೂಡ ಹಾಗೂ ೨೬ ಮತ್ತು ೨೭ ರಂದು ೨ ದಿನಗಳ ಕಾಲ ಸಂಭ್ರಮದ ಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಲಾಯಿತು. ಹಿರಿಯರಾದ ಶೀ ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸುಧಾಕರ ಶೆಟ್ಟಿ ಮುನಿಯಾಲು, ಪಡುಪರ್ಕಳ ಹರೀಶ ಶೆಟ್ಟಿ ಸೇರಿದಂತೆ ಹಲವರು ವಿವಿಧ ಸಲಹೆ ಮಾರ್ಗದರ್ಶನ ನೀಡಿದರು.
ಸಮಿತಿಯ ಸಂಚಾಲಕ ಪ್ರಸನ್ನ ಶೆಟ್ಟಿ, ಕೋಶಾಧಿಕಾರಿ ಸಂತೋಷ ಆಚಾರ್ಯ, ಸಹ ಸಂಚಾಲಕ ರವಿ ಶೆಟ್ಟಿ, ಹರೀಶ ಪೂಜಾರಿ, ಗೌರವ ಕಾರ್ಯದರ್ಶಿ ಜನಾರ್ಧನ ಆಚಾರ್ಯ, ರಂಜಿತಾ ಎಸ್, ಸಹ ಕೋಶಾಧಿಕಾರಿ ಸವಿತಾ ಶೆಟ್ಟಿ, ಶ್ರತಿ, ಗೌರವ ಸಲಹೆಗಾರರಾದ ಚಂದ್ರಶೇಖರ ಶೆಟ್ಟಿಗಾರ್, ಭಾಸ್ಕರ ಶೆಟ್ಟಿ, ಕೇಶವ ನಾಯಕ್, ಪ್ರಕಾಶ ಪೂಜಾರಿ, ಗಣಪತಿ ನಾಯಕ್, ಉಪಾಧ್ಯಕ್ಷರಾದ ಹೃದಯ ಕುಮಾರ್ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಜ್ಯೋತಿ ಪ್ರಸಾದ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ನಾಗಿಣಿ ಶೆಟ್ಟಿ, ಸಂದೀಪ್ ಶೆಟ್ಟಿ, ಸುಕೇಶ ಶೆಟ್ಟಿ, ದಿವಾಕರ ಶೆಟ್ಟಿ, ಶೈಲೇಶ್ ಶೆಟ್ಟಿ, ಉದಯ ಪೂಜಾರಿ, ಚಿತ್ರಾ ಪೂಜಾರಿ, ಕೃಷ್ಣ ಮಾವಿನಕಟ್ಟೆ, ಭೋಜು ಮಾವಿನಕಟ್ಟೆ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶಿಲ್ಪಾ ಪೂಜಾರಿ, ಊರಿನವರು, ಶಾಲಾಭಿವೃದ್ಧಿ ಸಮಿತಿ, ಶತಮಾನೋತ್ಸವ ಸಮಿತಿ, ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು, ಪದಾಧಿಕಾರಿಗಳು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.



