ಪಡುಕುಡೂರು : ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನರ್ಸರಿ ಮತ್ತು ಎಲ್‌ಕೆಜಿ ಮಕ್ಕಳಿಗೆ ಪಡುಕುಡೂರು ಸುಶ್ಮೀತಾ ಪ್ರಸನ್ನ ಶೆಟ್ಟಿ ಜಯಲೀಲಾ ಅವರು ಕೊಡುಗೆಯಾಗಿ ನೀಡಿದ ಸಮವಸ್ತ್ರವನ್ನು ಇತ್ತೀಚೆಗೆ ವಿತರಿಸಲಾಯಿತು.
ಸಮವಸ್ತ್ರ ಕೊಡುಗೆ ನೀಡಿದ ಶತಮಾನೋತ್ಸವ ಸಮಿತಿಯ ಸಂಚಾಲಕ ಪ್ರಸನ್ನ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಜ್ಯೋತಿ ಪ್ರಸಾದ್ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಶಿವಪುರ ಕೊರಗಜ್ಜ ಕ್ಷೇತ್ರದ ಶಂಕರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಿಲ್ಪಾ ಪೂಜಾರಿ, ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್, ಶಿಕ್ಷಕಿಯರಾದ ಶೃತಿ, ಶೋಭಾ, ಶಾಲಿನಿ,ಭಾವನಾ, ಚೈತ್ರಾ, ಅಂಗನವಾಡಿ ಶಿಕ್ಷಕಿ ಸವಿತಾ ಶೆಟ್ಟಿ, ಸಹಾಯಕಿ ಅಶ್ವಿತಾ ಉಪಸ್ಥಿತರಿದ್ದರು.



