Saturday, August 8, 2026
Homeಬೆಳ್ವೆ ಗ್ರಾಮ ಪಂಚಾಯತ್‌ಸಮಾಜದ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರ ಮಹತ್ವ : ಲೋಕೇಶ ಅಡಿಗ

ಸಮಾಜದ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರ ಮಹತ್ವ : ಲೋಕೇಶ ಅಡಿಗ

ಬೆಳ್ವೆಯಲ್ಲಿ ದ್ರಾವಿಡ ಬ್ರಾಹ್ಮಣ ಪರಿಷತ್ ವಾರ್ಷಿಕ ಅಧಿವೇಶನದ ಸಭಾ ಕಾರ್ಯಕ್ರಮ.

ಬೆಳ್ವೆ : ಸಂಘಟನೆಯಿAದ ಮಾತ್ರ ಬ್ರಾಹ್ಮಣ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯ.ಮಕ್ಕಳಿಗೆ ವಿದ್ಯಾ,ಬುದ್ಧಿ,ವಿನಯ,ದಾನ ಧರ್ಮ ಇತ್ಯಾದಿ ಮೌಲ್ಯಗಳನ್ನು ತಿಳಿಸಿಕೊಡಬೇಕು. ನದಿ, ಭೂರಮೆ, ಗೋಮಾತೆಯಂತೆ ಪರೋಪಕಾರಿಗಳಾಗಬೇಕು.ಉಪದೇಶದ ಜೊತೆಗೆ ಅದನ್ನು ಪಾಲಿಸುವ ಕಾರ್ಯವಾಗಬೇಕು ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇದಮರ‍್ತಿ ಲೋಕೇಶ ಅಡಿಗ ಹೇಳಿದರು.
ಅವರು ಬೆಳ್ವೆ ವಿಪ್ರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕುಂದಾಪುರ ತಾಲ್ಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯದ ವಾರ್ಷಿಕ ಅಧಿವೇಶನದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯಾಧ್ಯಕ್ಷ ಎಂ ಸತ್ಯನಾರಾಯಣ ಹೆಬ್ಬಾರ್ ಮರೂರು ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ತಾಲ್ಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ,ಕಾರ್ಯದರ್ಶಿ ವಾದಿರಾಜ ಹೆಬ್ಬಾರ್,ಮಹಿಳಾಧ್ಯಕ್ಷೆ ಭಾರ್ಗವಿ ಪಿ.ಭಟ್ ಗೋಳಿಯಂಗಡಿ, ಗೌರವಾಧ್ಯಕ್ಷ ರಾಧಾಕೃಷ್ಣ ಮಯ್ಯ ಹೊನ್ಕಲ್ಲು,ಮಹಿಳಾಧ್ಯಕ್ಷೆ ಕಲ್ಪನಾ ಎನ್.ಅಡಿಗ,ವೇ.ಮೂ ಶಂಕರನಾರಾಯಣ ಐತಾಳ್,ಯುವ ವೇದಿಕೆ ಅಧ್ಯಕ್ಷ ವಾಸುದೇವ ಬಾಯರಿ,ವಿಪ್ರವಾಣಿ ಸಂಪಾದಕ, ನಿವೃತ್ತ ಪ್ರಾಧ್ಯಾಪಕ ಶಂಕರ ರಾವ್ ಕಾಳಾವರ ಉಪಸ್ಥಿತರಿದ್ದರು.

ಕರ್ಣಾಟಕ ಬ್ಯಾಂಕ್ ನಿರ್ದೇಶಕ ಎಸ್.ಬಾಲಕೃಷ್ಣ ಅಲ್ಸೆ, ಕೃಷಿಕ ಸುಬ್ರಹ್ಮಣ್ಯ ಉಪಾಧ್ಯಾಯ ಮರೂರು, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿವೃತ್ತ ಹಿರಿಯ ವ್ಯವಸ್ಥಾಪಕಿ, ತಾರಿಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಸರೋಜ ನಕ್ಕತ್ತಾಯ ಸರ‍್ಗೋಳಿ ಅವರನ್ನು ಸನ್ಮಾನಿಸಲಾಯಿತು.ಪಿಯುಸಿ ಸಾಧಕಿ ವಿಧಾತ್ರಿ ಆರ್.ಬಾಯರಿ ಪಂಚಮಿ ಚಾರಿಟೇಬಲ್ ಟ್ರಸ್ಟ್ ಗಾಂಧಿ ಆಸ್ಪತ್ರೆ ಉಡುಪಿ ಇವರಿಂದ ಪಿಯುಸಿ ಸಾಧಕಿ ವಿಧಾತ್ರಿ ಆರ್.ಬಾಯರಿ ಗೆ ಪ್ರತಿಭಾ ಪುರಸ್ಕಾರ, ವಿಪ್ರ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು,ಪಿಯುಸಿ ಸಾಧಕಿಯರಾದ ಮೇಧಾ ಉಡುಪ,ಶರಧಿ ಇವರಿಗೆ ಕಲಿಕಾ ಪ್ರೋತ್ಸಾಹ, ವೇ.ಮೂ ಶ್ರೀನಿವಾಸ ಬಾಯರಿ ವಿದ್ಯಾರ್ಥಿಗಳಿಗೆ ನೀಡಿದ ನಗದು ಪುರಸ್ಕಾರವನ್ನು ವಿತರಿಸಲಾಯಿತು.

ವಿಪ್ರ ಮಹಿಳಾ ಬಳಗ,ಪದ್ಮಾವತಿ ಭಜನಾ ಮಂಡಳಿ ಗೋಳಿಯಂಗಡಿ ಇವರಿಂದ ವಿಷ್ಣು ಸಹಸ್ರನಾಮ ಪಾರಾಯಣ,ಭಜನೆ,ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದ ಗಣಪತಿ ದೇವರ ಸನ್ನಿಧಿಯಲ್ಲಿ ವೇ.ಮೂ ರಾಜೇಂದ್ರ ಐತಾಳರ ನೇತೃತ್ವದಲ್ಲಿ ಗಣಹೋಮ ನಡೆಯಿತು.

ವೇದಮರ‍್ತಿ ಶ್ರೀನಿವಾಸ ಬಾಯರಿ ಬೆಪ್ಡೆ ಸ್ವಾಗತಿಸಿದರು,ಪೂರ್ಣಿಮಾ ರಾಜೇಂದ್ರ ಐತಾಳ್ ಬೆಳ್ವೆ ಪ್ರಾರ್ಥಿಸಿದರು. ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಬೆಳ್ವೆ ವಾರ್ಷಿಕ ವರದಿ ವಾಚಿಸಿದರು.ಚಂದ್ರಶೇಖರ ಮಂಜ ಮಡಾಮಕ್ಕಿ ಆಯವ್ಯಯ ಮಂಡಿಸಿದರು.ಗಣೇಶ ಹೇರಳೆ,ಚೈತ್ರಾ ಮಹಾಬಲೇಶ್ವರ ಐತಾಳ ನಿರೂಪಿಸಿದರು. ಸುಬ್ರಹ್ಮಣ್ಯ ಭಟ್,ಶಿವರಾಮ ಮಯ್ಯ,ವೈ.ಕೆ ಪ್ರಸನ್ನ ಭಟ್,ಮಹಾಬಲ ಕಲ್ಕೂರ್ ಸಹಕರಿಸಿದರು.ರಾಮಕೃಷ್ಣ ಬಾಯರಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments