Saturday, August 8, 2026
Homeಬೆಳ್ವೆ ಗ್ರಾಮ ಪಂಚಾಯತ್‌ಸಹಕಾರಿ ಸಂಘದ ಸಮಾಜಮುಖಿ ಸೇವಾ ಕಾರ್ಯ ಪ್ರಶಂಸನೀಯ : ಎಎಸ್‌ಐ ರಾಜೇಂದ್ರ ಮಣಿಯಾಣಿ.

ಸಹಕಾರಿ ಸಂಘದ ಸಮಾಜಮುಖಿ ಸೇವಾ ಕಾರ್ಯ ಪ್ರಶಂಸನೀಯ : ಎಎಸ್‌ಐ ರಾಜೇಂದ್ರ ಮಣಿಯಾಣಿ.

ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಬ್ಯಾರಿಕೇಡ್‌ಗಳ ಕೊಡುಗೆ.

ಗೋಳಿಯಂಗಡಿ : ಸಹಕಾರಿ ಸಂಘಗಳು ವಿವಿಧ ಜನೋಪಯೋಗಿ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಸ್ಪಂದಿಸುತ್ತಿರುವುದು ಪ್ರಶಂಸನೀಯ,ಶಾಲಾ ಮಕ್ಕಳ ಸುರಕ್ಷತೆಯ ಹಿತದೃಷ್ಠಿಯಿಂದ ಬ್ಯಾರಿಕೇಡ್‌ಗಳು ಪ್ರಯೋಜನವಾಗಲಿವೆ ಎಂದು ಶಂಕರನಾರಾಯಣ ಪೊಲೀಸ್ ಠಾಣಾ ಎಎಸ್‌ಐ ರಾಜೇಂದ್ರ ಮಣಿಯಾಣಿ ಹೇಳಿದರು.ಅವರು ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಹಿಲಿಯಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯಲ್ಲಿ ಅಳವಡಿಸಲು ಕೊಡುಗೆಯಾಗಿ ನೀಡಿದ 2 ಬ್ಯಾರಿಕೇಡ್‌ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಗೋಳಿಯಂಗಡಿ ಶಾಖಾ ವ್ಯವಸ್ಥಾಪಕ ಶರತ್ ಶೆಟ್ಟಿ,ನಿರ್ದೇಶಕ ಚಂದ್ರ ಪೂಜಾರಿ, ಆವರ್ಸೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ಪ್ರಮೋದ ಹೆಗ್ಡೆ ಹಿಲಿಯಾಣ,ಲಕ್ಷö್ಮಣ ಪೂಜಾರಿ, ಕೆಡಿಪಿ ಸದಸ್ಯ ಚಿತ್ತರಂಜನ್‌ದಾಸ್ ಶೆಟ್ಟಿ ಹಿಲಿಯಾಣ,ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಹಿಲಿಯಾಣ ಎಜುಕೇಶನ್ ಟ್ರಸ್ಟ್ ಸದಸ್ಯ ಕರುಣಾಕರ ಶೆಟ್ಟಿ,ಪ್ರಶಾಂತ ನಾಯ್ಕ,ಸಿದ್ದಾರ್ಥ ನಾಯ್ಕ, ಮುಖ್ಯ ಶಿಕ್ಷಕಿ ಸುಜಾತ,ಸಹ ಶಿಕ್ಷಕಿಯರು,ಹಳೆ ವಿದ್ಯಾರ್ಥಿಗಳಾದ ನವನೀತ ಶೆಟ್ಟಿ,ಸುಧೀರ್ ಹೆಗ್ಡೆ,ದಿನೇಶ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments