Saturday, August 8, 2026
Homeಹೆಬ್ರಿಕಡ್ತಲ : ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸುರೇಖಾ ಅವರಿಗೆ ಅಭಿನಂದನೆ.

ಕಡ್ತಲ : ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸುರೇಖಾ ಅವರಿಗೆ ಅಭಿನಂದನೆ.

ಕಡ್ತಲ : ಕಡ್ತಲ ಗ್ರಾಮ ಪಂಚಾಯತಿ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ 2 ವರ್ಷಗಳ ಸೇವೆ ಸಲ್ಲಿಸಿ ಹೆಬ್ರಿ ತಾಲ್ಲೂಕಿನ ಚಾರ ಪಂಚಾಯತಿಗೆ ವರ್ಗಾವಣೆಗೊಂಡ ಸುರೇಖಾ ಅವರನ್ನು ಅಭಿನಂದಿಸಲಾಯಿತು. ಮರ್ಣೆ ಗ್ರಾಮ ಪಂಚಾಯತಿಯಿಂದ ಕಡ್ತಲ ಗ್ರಾಮ ಪಂಚಾಯತಿಗೆ ಪ್ರಬಾರ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡ ಅಂಕಿತಾ ಅವರನ್ನು ಸ್ವಾಗತಿಸಲಾಯಿತು.

ನಿವೃತ್ತ ಐಎಎಸ್ ಅಧಿಕಾರಿ ಎಳ್ಳಾರೆ ಬಿ. ಸದಾಶಿವ ಪ್ರಭು, ಡಾ. ಪ್ರಮೋದ್ ಕುಮಾರ್ ಹೆಗ್ಡೆ ಕಡ್ತಲ, ಧಾರ್ಮಿಕ ಮುಖಂಡ ಪ್ರಶಾಂತ್ ಬೆಳಿರಾಯ, ಮಂಗಳೂರು ಎಂಆರ್‌ಪಿಎಲ್ ವ್ಯವಸ್ಥಾಪಕ ಅಶೋಕ್ ಕುಮಾರ್ ಹೆಗ್ಡೆ, ಲಕ್ಷ್ಮೀ ಜನಾರ್ದನ ದೇವಸ್ಥಾನದ ಟ್ರಸ್ಟಿ ಮುಂಡಾರು ಪ್ರಸನ್ನ ಕುಮಾರ್ ಶೆಟ್ಟಿ , ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸುಕೇಶ್ ಕುಮಾರ್ ಹೆಗ್ಡೆ, ಗ್ರಾಮ ಪಂಚಾಯಿ ಮಾಜಿ ಸದಸ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವಿನೀತ್ ಹೆಗ್ಡೆ ಪ್ರಾರ್ಥನೆ ಸಲ್ಲಿಸಿದರು. ದೀಪಕ್ ಕಾಮತ್ ನಿರೂಪಿಸಿದರು. ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಸತೀಶ್ ಪೂಜಾರಿ ವಂದಿಸಿದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments