Sunday, August 9, 2026
Homeಹೆಬ್ರಿಎಳ್ಳಾರೆ ಸದಾಶಿವ ಪ್ರಭು ಅವರಿಗೆ ಕಡ್ತಲದಲ್ಲಿ ಅಭಿನಂದನಾ ಕಾರ್ಯಕ್ರಮ.

ಎಳ್ಳಾರೆ ಸದಾಶಿವ ಪ್ರಭು ಅವರಿಗೆ ಕಡ್ತಲದಲ್ಲಿ ಅಭಿನಂದನಾ ಕಾರ್ಯಕ್ರಮ.

ವಿವಿಧ ಹುದ್ದೆಗಳಲ್ಲಿ ಕಪ್ಪಚುಕ್ಕೆ ಇಲ್ಲದ ಕರ್ತವ್ಯ ವಿಶೇಷ : ಸುನೀಲ್ ಕುಮಾರ್.

ಕಡ್ತಲ : ಉಡುಪಿ ಜಿಲ್ಲೆಯ ನಿವೃತ್ತ ಅಪರ ಜಿಲ್ಲಾಧಿಕಾರಿ ಎಳ್ಳಾರೆ ಸದಾಶಿವ ಪ್ರಭು ಅವರಿಗೆ ಕಡ್ತಲ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಅಭಿನಂದನಾ ಸಭೆ ನಡೆಯಿತು.

ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಬಳಿಕ ಕಂದಾಯ ಇಲಾಖೆಯ ವಿವಿಧ ಹುದ್ದೆಯ ಜೊತೆಗೆ ವಿವಿಧ ಇಲಾಖೆಯಲ್ಲಿ “ಯಾವುದೇ ಕಪ್ಪುಚುಕ್ಕೆಯಿಲ್ಲದೆ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಸದಾಶಿವ ಪ್ರಭು ಅವರ ಕರ್ತವ್ಯ ನಿಷ್ಠೆ ಶ್ಲಾಘನೀಯವಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅವರ ಕಾರ್ಯಶೈಲಿ ಉಡುಪಿ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಅಭಿನಂದಿಸಿದರು.

ಅಜೆಕಾರು ನಂದಕುಮಾರ್ ಹೆಗ್ಡೆ  ಅಭಿನಂದನಾ ಭಾಷಣ ಮಾಡಿದರು. ಸದಾಶಿವ ಪ್ರಭು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಡಾ. ಪ್ರಮೋದ್ ಕುಮಾರ್ ಹೆಗ್ಡೆ ಕಡ್ತಲ , ಧಾರ್ಮಿಕ ಮುಖಂಡ ಪ್ರಶಾಂತ್, ಮಂಗಳೂರು ಎಂಆರ್‌ಪಿಎಲ್ ವ್ಯವಸ್ಥಾಪಕ ಅಶೋಕ್ ಕುಮಾರ್ ಹೆಗ್ಡೆ, ಎಳ್ಳಾರೆ ಲಕ್ಷ್ಮೀ ಜನಾರ್ದನ ದೇವಸ್ಥಾನದ ಟ್ರಸ್ಟಿ ಮುಂಡಾರು ಪ್ರಸನ್ನ ಕುಮಾರ್ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ದೀಪಕ್ ನಿರೂಪಿಸಿದರು. ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಅಶ್ವಿನಿ ಸುಕೇಶ್ ಹೆಗ್ಡೆ ಅಭಿನಂದನಾ ಪತ್ರವನ್ನು ವಾಚಿಸಿದರು. ಸತೀಶ್ ಪೂಜಾರಿ ವಂದಿಸಿದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments