ಹಂಗಾರಕಟ್ಟೆ : ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಬುಧವಾರ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಇವರ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬ್ರಹ್ಮಾವರ ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಮುಕ್ತ ಬಾಯಿ ಮತ್ತು ಪ್ರೋಭೆಷನರಿ ಸಬ್ ಇನ್ಸ್ ಫೆಕ್ಟರ್ ಆಶ್ರೀತಾ. ಎ. ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಪೋಕ್ಸೋ, ಸೈಬರ್ ಕ್ರೈಂಸ್, ಮಕ್ಕಳ ಕಳ್ಳ ಸಾಗಣಿಕೆ, ಮಾದಕ ದ್ರವ್ಯ ವ್ಯಸನ ಮುಂತಾದ ವಿಷಯಗಳು ಮತ್ತು ಕಾನೂನು ಮಾಹಿತಿಯನ್ನು ನೀಡಿದರು.ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಕುಸುಮ ಮನೋಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪೋಷಕ ಪ್ರತಿನಿಧಿ ರೇಖಾ ಉಡುಪ, ಡಿಎಲ್‌ಎಸ್‌ಎ ಪಿಎಲ್‌ವಿ ರಕ್ಷಿತ್ ಕುಮಾರ್ ಭಾಗವಹಿಸಿದ್ದರು.
ಮನೋಜ್ ಕುಮಾರ್, ಅರವಿಂದ್ ಶರ್ಮಾರೊ. ಲಕ್ಷ್ಮೀನಾರಾಯಣ, ಲೀಲಾವತಿ, ಸುಲತಾ ಹೆಗಡೆ, ಜ್ಯೋತಿ ಉದಯ್ ಕುಮಾರ್, ಅಮಿತಾ, ಮಮತಾ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕಿ ವರ್ಷ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಹರ್ಷವರ್ಧನ ಶೆಟ್ಟಿ ನಿರೂಪಿಸಿದರು.



