ಕುಚ್ಚೂರು : ಹೆಬ್ರಿ ತಾಲ್ಲೂಕಿನ ಕುಚ್ಚೂರು ಅಣ್ಣಯ್ಯ ಅಂಬಿಗ ಅವರ ಗದ್ದೆಗೆ ಕೋಳಿ ತ್ಯಾಜ್ಯದ ರಾಶಿ ಬಿದ್ದಿದೆ. ಕೋಳಿ ತ್ಯಾಜ್ಯವನ್ನು ಗದ್ದೆಗೆ ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಎಲ್ಲೆಂದರಲ್ಲಿ ಕೋಳಿ ಅಂಗಡಿಗಳ ತ್ಯಾಜ್ಯವನ್ನು ಎಸೆಯುವುದು ಕಂಡು ಬರುತ್ತಿದೆ. ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಅಣ್ಣಯ್ಯ ಅಂಬಿಗ ಒತ್ತಾಯಿಸಿದ್ದಾರೆ. ಹೆಬ್ರಿ ತಾಲ್ಲೂಕಿನ ವಿವಿದೆಡೆಯೂ ಕೋಳಿ ತ್ಯಾಜ್ಯದ ಎಸೆಯುವ ಅನೇಕ ಸಮಸ್ಯೆಗಳಿರುವುದರಿಂದ ಸಂಬಂಧಪಟ್ಟವರು ಅದಕ್ಕೆ ಸೂಕ್ತ ಕ್ರಮ ಜರುಗಿಸಲು ಸಾರ್ವಜನಿಕರು ಒತ್ತಾಯಸಿದ್ದಾರೆ.



