Saturday, August 8, 2026
Homeಬೆಳ್ವೆ ಗ್ರಾಮ ಪಂಚಾಯತ್‌ಬೆಳ್ವೆ : ಸುರ್ಗೋಳಿ ಶಾಲೆ ಬ್ಯಾಗ್ - ವಿವಿಧ ಪರಿಕರಗಳ ವಿತರಣೆ.

ಬೆಳ್ವೆ : ಸುರ್ಗೋಳಿ ಶಾಲೆ ಬ್ಯಾಗ್ – ವಿವಿಧ ಪರಿಕರಗಳ ವಿತರಣೆ.

ಬೆಳ್ವೆ : ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಟ್ರಸ್ಟ್ ಬೆಳ್ವೆ, ಗೀತಾ ಹೆಚ್ ಎಸ್ ಎನ್ ಫೌಂಡೇಶನ್ ಕೋಟೇಶ್ವರ, ಟೀಮ್ ಮಲೆನಾಡು ಹ್ಯೂ ಮೆನಿಟರಿಯನ್ ಟ್ರಸ್ಟ್ ಬೆಳ್ವೆ , ಲಯನ್ಸ್ ಕ್ಲಬ್ ಬೆಳ್ವೆ ಆರ್ಡಿ ಗೋಳಿಯಂಗಡಿ ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣ ಸಮಿತಿ ಸುರ್ಗೋಳಿ ಇದರ ಆಶ್ರಯದಲ್ಲಿ ಹೆಬ್ರಿ ತಾಲ್ಲೂಕಿನ ಸುರ್ಗೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಸಮವಸ್ತ್ರ, ಟೈ ,ಬೆಲ್ಟ್, ಗುರುತು ಪತ್ರ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಬೇಬಿ ವಹಿಸಿದ್ದರು. ಗೀತಾ ಹೆಚ್ಎಸ್ಎನ್ ಫೌಂಡೇಶನ್ ಕೋಟೇಶ್ವರ ಅಧ್ಯಕ್ಷ ಶಂಕರ ಐತಾಳ್, ಟೀಮ್ ಮಲೆನಾಡು ಹ್ಯೂಮೆನಿಟರಿಯನ್ ಟ್ರಸ್ಟ್  ಬೆಳ್ವೆ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಲಯನ್ಸ್ ಕ್ಲಬ್ ಬೆಳ್ವೆ ಆರ್ಡಿ ಗೋಳಿಯಂಗಡಿ ಅಧ್ಯಕ್ಷೆ ಚಂದ್ರಿಕಾ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಕೃಷಿಕ ರಾಮಚಂದ್ರ ಅಲ್ಸೆ, ಆಂಗ್ಲ ಮಾಧ್ಯಮ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಬೆಳ್ವೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ, ಬೆಳ್ವೆ ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಕಿಶನ್ ರಾಜ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಶೆಟ್ಟಿ, ಟೀಮ್ ಮಲೆನಾಡು ಹ್ಯೂಮೆನಿಟರಿಯನ್ ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ, ನಿವೃತ ಮುಖ್ಯ ಶಿಕ್ಷಕ ಪಟ್ಟಾಭಿ ರಾಮ್ ಭಟ್, ಲಯನ್ಸ್  ಕ್ಲಬ್ ಬೆಳ್ವೆ ಸದಸ್ಯ ಬಾಬು ಶೆಟ್ಟಿ,  ಆಂಗ್ಲ ಮಾಧ್ಯಮ ಶಿಕ್ಷಣ ಸಮಿತಿ ಕೋಶಾಧಿಕಾರಿ ಗೋಪಾಲಕೃಷ್ಣ ಹೆಬ್ಬಾರ್, ನಾಗರಾಜ್ ನಕ್ಕತಾಯ, ಕೃಷ್ಣ ನಾಯಕ್, ಚಂದ್ರ ಶೇಖರ್ ಶೆಟ್ಟಿ ಉಪಸ್ಥಿರಿದ್ದರು. ಶಾಲಾ ಮುಖ್ಯ ಶಿಕ್ಷಕ ಹಿರಿಯಣ್ಣ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪ್ರೇಮ ನಿರೂಪಿಸಿ ಶಿಕ್ಷಕಿ ಕುಮಾರಿ ಆರತಿ ವಂದಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments