ಪಡುಬಿದ್ರೆ ಟೋಲ್ ಗೇಟ್ ನಲ್ಲಿ ಲಾರಿ ತಡೆದು ನಿಲ್ಲಿಸಿದ ಪೋಲಿಸರು !
ಪಡುಬಿದ್ರೆ : ಹೆಬ್ರಿ ತಾಲ್ಲೂಕಿನ ಮುದ್ರಾಡಿಯಲ್ಲಿ 2 ಕಡೆ ಮತ್ತು ಮುನಿಯಾಲಿನಲ್ಲಿ 1 ಕಡೆಯವರ ರಬ್ಬರ್ ಮರಗಳನ್ನು ಕಡಿದು ಮರದ ತುಂಡುಗಳನ್ನು ಹಣ ನೀಡದೆ ಲಾರಿಯಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿರುವ ಸುದ್ದಿ ತಿಳಿದು ಪಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿ ಪಡುಬಿದ್ರೆ ಟೋಲ್ ಗೇಟ್ ಬಳಿ ಲಾರಿಯನ್ನು ತಡೆದು ನಿಲ್ಲಿಸಿದ ಘಟನೆ ಭಾನುವಾರ ಮಧ್ಯಾಹ್ನ
ನಡೆದಿದೆ.
ಭಾನುವಾರ ಮಧ್ಯಾಹ್ನದಿಂದ ರಬ್ಬರ್ ಮರ ತುಂಬಿದ ಲಾರಿಯು ಪಡುಬಿದ್ರೆಯ ಟೋಲ್ ಗೇಟ್ ಬಳಿಯೇ ಇದೆ.ಮುದ್ರಾಡಿಯ ಸುಜಾತ ಶೆಟ್ಟಿ ವಿಜೇಂದ್ರ ಶೆಟ್ಟಿ ಮನೆಯವರ, ಮುದ್ರಾಡಿ ಆಶಾ ಆಚಾರ್ ಮನೆ ಹಾಗೂ ಮುನಿಯಾಲಿನ ಸೀಜು ಎಂಬವರಿಂದ ಶಕೀಮ್ ಮತ್ತು ರಮೇಶ್ ನೇತ್ರತ್ವದ ತಂಡವು ರಬ್ಬರ್ ಮರಗಳನ್ನು ಕೇವಲ ಮುಂಗಡ ಹಣ ಕೊಟ್ಟು ಖರೀದಿಸಿದ್ದರು.
ಆದರೆ ನಿಗದಿ ಪಡಿಸಿದ ಉಳಿದ ಹಣ ನೀಡಿರಲಿಲ್ಲ. ಮರದ ತುಂಡುಗಳನ್ನು ಸಾಗಾಟ ಮಾಡುವಾಗ ಹಣವನ್ನು ನೀಡುತ್ತೇವೆ ಎಂದು ನಂಬಿಸುತ್ತಿದ್ದರು. ಹಣ ನೀಡದೇ ವಂಚಿಸುವ ಯತ್ನ ಅರಿತ ಮರ ನೀಡಿದ ಮನೆಯವರು ಹೆಬ್ರಿ ಮತ್ತು ಅಜೆಕಾರು ಪೊಲೀಸರಿಗೆ 3 ದಿನಗಳ ಹಿಂದೆ ದೂರು ನೀಡಿದ್ದರು.
ಆದರೇ ಪೊಲೀಸರು ಯಾವೂದೇ ಕ್ರಮ ಕೈಗೊಳ್ಳಲಿಲ್ಲ. ಇದನ್ನೇ ಬಂಡವಾಳವಾಗಿಸಿದ ತಂಡವು ಭಾನುವಾರ ತಮಿಳುನಾಡು ಮೂಲದ ಲಾರಿಯಲ್ಲಿ ರಬ್ಬರ್ ಮರವನ್ನು ತುಂಬಿಸಿಕೊಂಡು ಪರಾರಿ ಯಾಗಲು ಯತ್ನಿಸುತ್ತಿದ್ದಾಗ ಭಾನುವಾರ ಪಡುಬಿದ್ರೆಯಲ್ಲಿ ಲಾರಿಯನ್ನು ತಡೆಯಲಾಗಿದೆ.
ಮರ ನೀಡಿ ವಂಚನೆಗೊಳಗಾದ ಆಶಾ ಆಚಾರ್ಯ, ಸುಜಾತ ಶೆಟ್ಟಿ ಮತ್ತು ಸೀಜು ಮುನಿಯಾಲು ಮತ್ತು ಅವರ ಕುಟುಂಬದ ಸದಸ್ಯರು ಪಡುಬಿದ್ರೆಯ ಟೋಲ್ ಗೇಟ್ ಬಳಿ ಲಾರಿ ಹತ್ತಿರ ಕಾದು ಕುಳಿತಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಮುದ್ರಾಡಿ ಮಂಜುನಾಥ ಪೂಜಾರಿ. ಮುದ್ರಾಡಿ 2 ಮತ್ತು ಮುನಿಯಾಲಿನ 1ಕುಟುಂಬಕ್ಕೆ ವಂಚನೆಯಾದ ಸುದ್ದಿ ತಿಳಿದ ತಕ್ಷಣ ಜನನಾಯಕರಾದ ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿಯವರು ಹೆಬ್ರಿ ಅಜೆಕಾರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಉಡುಪಿಯ ಎಂ.ಎ.ಗಫೂರ್ ಅವರಿಗೂ ಮಾಹಿತಿ ನೀಡಿ ಪಡುಬಿದ್ರೆಯಲ್ಲಿ ಲಾರಿಯನ್ನು ತಡೆಯಲು ಸೂಚನೆ ನೀಡಿದ್ದಾರೆ.
ಇದೀಗ ರಬ್ಬರ್ ಮರ ತುಂಬಿದ ಲಾರಿಯು ಪಡುಬಿದ್ರೆಯ ಟೋಲ್ ಗೇಟ್ ನಲ್ಲಿದೆ. ಮೂವರು ಮರ ಮಾರಾಟ ಮಾಡಿದವರು ಒಬ್ಬರು ಮರ ಕಟಾವು ಮಾಡುವ ಕಾರ್ಮಿಕರ ತಂಡ ಸೇರಿ
ಒಟ್ಟು 4 ಮಂದಿಗೆ ವಂಚಿಸುವ ಯತ್ನ ನಡೆದಿದೆ.
ಪೋಲಿಸರಿಗೆ ಈ ಹಿಂದೆಯೇ ಮಾಹಿತಿ ನೀಡಿದ್ದರೂ ನಿರ್ಲಕ್ಷ ವಹಿಸಿದ್ದರಿಂದ ಅಮಾಯಕರಿಗೆ ವಂಚನೆ ಯತ್ನದ ಪ್ರಕರಣಗಳು ನಡೆದಿದೆ. ಸಕಾಲದಲ್ಲಿ ಎಚ್ಚೆತ್ತ ಕಾರಣದಿಂದ ಲಾರಿಯನ್ನು ತಡೆಯಲಾಗಿದೆ.
ಪೋಲಿಸರ ನಿರ್ಲಕ್ಷದಿಂದಲೇ ಈ ಘಟನೆಗಳು ನಡೆದಿದೆ. ರಬ್ಬರ್ ಮರ ಕಡಿದು ಅಮಾಯಕರಿಗೆ ವಂಚಿಸುವ ಬೃಹತ್ ಜಾಲ ಉಡುಪಿ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ ಬಗ್ಗೆ ಸಂಶಯವನ್ನು ಮಂಜುನಾಥ ಪೂಜಾರಿ ವ್ಯಕಪಡಿಸಿದ್ದಾರೆ. ಬಡವರಿಗೆ ಅನ್ಯಾಯವಾಗುವ ಮಾಹಿತಿ ನೀಡಿದ್ದರೂ ಅತೀಯಾದ ನಿರ್ಲಕ್ಷ ಮಾಡಿದ್ದ ರಿಂದ ವಂಚಿಸುವ ಯತ್ನ ನಡೆದಿದೆ. ಪೊಲೀಸರ ಕಾರ್ಯ ವೈಖರಿಯ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಡುಬಿದ್ರೆಗೆ ಬೇಟಿ ನೀಡಿ ವಂಚನೆಗೊಳಗಾದ ಮಂದಿಗೆ ಧೈರ್ಯ ನೀಡಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಅನ್ಯಾಯಗೊಳಗಾದವರ ಪರ ನಿಂತಿದ್ದಾರೆ. ಪೊಲೀಸರು ಸೂಕ್ತ ತನಿಖೆಯನ್ನು ನಡೆಸಿ ನ್ಯಾಯ ದೊರಕಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮರ ಕಡಿದ ಕಾರ್ಮಿಕರ ಕಡ್ತಲದ ತಂಡಕ್ಕೂ ವಂಚಿಸಲಾಗಿದೆ. ಒಟ್ಟು ಸುಮಾರು 7 ಲಕ್ಷ ರೂಪಾಯಿಗಳನ್ನು ವಂಚಿಸಲು ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ. ಮರ ಖರೀದಿಸಿದ ವ್ಯಕ್ತಿ ಸ್ಥಳಕ್ಕೆ ಬಂದು ಹಣ ಪಾವತಿಸಿದ ಬಳಿಕ ಪರಿಸ್ಥಿತಿ ತಿಳಿಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಹೆಬ್ರಿ ಠಾಣೆಯಲ್ಲಿ ಮೂರು ಮಂದಿ ಹಾಗೂ ಅಜೆಕಾರು ಠಾಣೆಯಲ್ಲಿ ಒಬ್ಬರು ದೂರು ನೀಡಿದ್ದಾರೆ. ಲಾರಿಯನ್ನು ತಡೆಯುವ ಬಗ್ಗೆ ಪಡುಬಿದ್ರೆ ಠಾಣೆಗೆ ದೂರು ನೀಡಲಾಗಿದೆ.
ಅನ್ಯಾಯಗೊಳಗಾದ ಎಲ್ಲರಿಗೂ ನ್ಯಾಯ ಒದಗಿಸುವ ಭರವಸೆಯನ್ನು ಪೋಲೀಸರು ನೀಡಿದ್ದಾರೆ.


