ಕಾರ್ಕಳ : ಎನ್.ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರ್ ಕಾರ್ಕಳ (ನಮ್ಮ ನಾಡ ಒಕ್ಕೂಟ (ರಿ) ಅಂಗ ಸಂಸ್ಥೆ) ಇದರ ನೂತನ ಅಧ್ಯಕ್ಷರಾಗಿ ಮುಸ್ತಾಕ್ ಅಹಮದ್ ಬೆಳ್ವೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಉಪಾಧ್ಯಕ್ಷರಾಗಿ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸೇವೆಸಲ್ಲಿಸಿರುತ್ತಾರೆ. ಪ್ರಸ್ತುತ ಸೆಂಟ್ರಲ್ ಕಮಿಟಿ ಸದಸ್ಯರಾಗಿ, ನಮ್ಮ ನಾಡ ಒಕ್ಕೂಟ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


