Wednesday, August 19, 2026
HomeUncategorizedಹೆಬ್ರಿ ತಾಲ್ಲೂಕು ಆಡಳಿತದಿಂದ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ.

ಹೆಬ್ರಿ ತಾಲ್ಲೂಕು ಆಡಳಿತದಿಂದ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ.

ಮಹಾನಾಯಕರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ : ಹೆಬ್ರಿ ತಹಶೀಲ್ಧಾರ್‌ ರಾಕೇಶ್‌ ಫ್ರಾನ್ಸಿಸ್.‌

ಹೆಬ್ರಿ ತಾಲ್ಲೂಕಿನ ಜನರ ಸೇವೆ ಮಾಡಲು ಸಿಕ್ಕಿದ ಅವಕಾಶ ನನಗೆ ಹೆಮ್ಮೆ.

ಹೆಬ್ರಿ : ಮಹಾನಾಯಕರು ಮತ್ತು ಲಕ್ಷಾಂತರ ಮಂದಿಯ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. ಪ್ರತಿಯೊಬ್ಬ ಭಾರತೀಯರ ಪಾಲಿಗೂ ಇಂದು ಪವಿತ್ರ ದಿನವಾಗಿದೆ. ನಾವೆಲ್ಲರೂ ಮಹಾನ್‌ ನಾಯಕರನ್ನು ಸ್ಮರಿಸಬೇಕಾಗಿದೆ ಎಂದು ಹೆಬ್ರಿಯ ನೂತನ ತಹಶೀಲ್ಧಾರ್‌ ರಾಕೇಶ್‌ ಫ್ರಾನ್ಸಿಸ್‌ ಬ್ರೀಟ್ಟೋ ಹೇಳಿದರು.
ಅವರು ಹೆಬ್ರಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ೮೦ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಕರಾವಳಿಯ ಗಂಡುಮೆಟ್ಟಿನ ಮಲೆನಾಡಿನ ತಪ್ಪಲಿನ ಹೆಬ್ರಿ ತಾಲ್ಲೂಕಿನ ಮಣ್ಣಿಗೂ ಸ್ವಾತಂತ್ರ್ಯ ಹೋರಾಟದ ದಿವ್ಯ ಇತಿಹಾಸವಿದೆ. ಕರಾವರಳಿಯಲ್ಲಿ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯರಾಗಿ ತ್ಯಾಗ ಮೆರೆದಿದ್ದಾರೆ. ಹಾಗಾಗಿಯೇ ನಾವು ನಮ್ಮ ಸುಂದರ ನಾಡಿನಲ್ಲಿ ನೆಮ್ಮದಿಯಿಂದ ಇದ್ದೇವೆ ಎಂದು ತಹಶೀಲ್ಧಾರ್‌ ರಾಕೇಶ್‌ ಫ್ರಾನ್ಸಿಸ್‌ ಬ್ರೀಟ್ಟೋ ಹೇಳಿದರು.

ತಹಶೀಲ್ಧಾರ್‌ ಆಗಿ ಹೆಬ್ರಿ ತಾಲ್ಲೂಕಿನ ಜನರ ಸೇವೆ ಮಾಡಲು ನನಗೆ ಸಿಕ್ಕಿರುವ ಅವಕಾಶ ಹೆಮ್ಮೆಯ ಸಂಗತಿ ಎಂದು ಭಾವಿಸುತ್ತೇನೆ. ಕಂದಾಯ ಇಲಾಖೆಯ ಮೂಲಕ ಜನರ ಸೇವೆ ಸೇವೆ ಮಾಡುವುದು, ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವುದು, ಸಕಾಲದಲ್ಲಿ ಜನರಿಗೆ ಸೇವೆ ನೀಡುವುದು, ಸರ್ಕಾರದ ಸವಲತ್ತು ಯೋಜನೆಯನ್ನು ಜನರಿಗೆ ತಲುಪಿಸವುದು ನಮ್ಮ ಮೊದಲ ಆಧ್ಯತೆಯಾಗಿದೆ ಎಂದು ರಾಕೇಶ್‌ ಫ್ರಾನ್ಸಿಸ್‌ ಬ್ರೀಟ್ಟೋ ಹೇಳಿದರು.

ಹೆಬ್ರಿಯನ್ನು ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗಿಸಲು ಬದ್ಧರಾಗಿದ್ದೇವೆ, ನಿಜವಾದ ಸ್ವಾತಂತ್ರ್ಯ ಎಂದರೆ ಧ್ವಜಾರೋಹಣ ಅಲ್ಲ, ಶೋಷಣೆ ರಹಿತ, ಭ್ರಷ್ಟಾಚಾರ ರಹಿತ ಸುಸ್ಥಿರ ಆಡಳಿತ ನೀಡಿ ಸ್ವಸ್ಥ ಸಮಾಜದ ನಿರ್ಮಾಣ ಮಾಡುವುದು ಆಗಿದೆ. ಪಶ್ಚಿಮ ಘಟ್ಠಗಳ ಹಸಿರು ಪರಿಸರ ರಕ್ಷಣೆ, ಶಾಂತಿ ಸೌಹಾರ್ಧತೆಯನ್ನು ಕಾಪಾಡಿ ಕಾನೂನಿಗೆ ಬದ್ಧರಾಗಿ ಬಾಳುವುದು ನಮ್ಮೇಲ್ಲರ ಕರ್ತವ್ಯವಾಗಿದೆ ತಹಶೀಲ್ಧಾರ್‌ ರಾಕೇಶ್‌ ಫ್ರಾನ್ಸಿಸ್‌ ಬ್ರೀಟ್ಟೋ ಹೇಳಿದರು.

ಹೆಬ್ರಿ ಪೊಲೀಸರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಶೇರಿಗಾರ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ಉಪ ತಹಶೀಲ್ಧಾರ್‌ ರಾಘವೇಂದ್ರ ನಾಯಕ್‌, ಲಾಯೆನ್ಸ್‌ ಸುಜ್ಯೋತಿ, ಕಂದಾಯ ನಿರೀಕ್ಷಕ ಸುಧೀರ್‌, ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಹೆಬ್ರಿಯ ವಿವಿಧ ಗಣ್ಯರು ಪ್ರಮುಖರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments