.ಕುಚ್ಚೂರು: ಅನೇಕರ ತ್ಯಾಗದ ಫಲವಾಗಿ ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಗಾಂಧೀಜಿ ಅಂಬೇಡ್ಕರ್ ಆದರ್ಶಗಳು ನಮಗೆ ಸದಾ ಮಾರ್ಗದರ್ಶಕ. ಸಿಕ್ಕಿರುವ ಸ್ವಾತಂತ್ರವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಮೆಸ್ಕಾಂ ಹೆಬ್ರಿ ವಿಭಾಗದ ಜೆಇ ಲಕ್ಷ್ಮೀಶ್ ಹೇಳಿದರು.
ಅವರು ಶಾಂತಿನಿಕೇತನದ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಜಯಕರ್, ಪ್ರಧಾನ ಕಾರ್ಯದರ್ಶಿ ರಾಜೇಶ್ರೀ, ಆಡಳಿತ ಮಂಡಳಿ ಸದಸ್ಯರಾದ ದೀಕ್ಷಿತ್ ನಾಯಕ್, ನರೇಂದ್ರ ಎಸ್. ಮರಸಣಿಗೆ, ಸುಜಾತಾ ಶೆಟ್ಟಿ, ರಘು ರಾಮ್ ಶೆಟ್ಟಿ, ನಳಿನಿ, ಕೆ ಗಣೇಶ್ ಇದ್ದರು.


