Wednesday, August 19, 2026
Homeಪ್ರಮುಖ ಸುದ್ದಿಕೆರ್ವಾಶೆ : ಆಟಿಡೊಂಜಿ ಕೆಸರ್ದ ಕೂಟದ ಸಂಭ್ರಮ.

ಕೆರ್ವಾಶೆ : ಆಟಿಡೊಂಜಿ ಕೆಸರ್ದ ಕೂಟದ ಸಂಭ್ರಮ.

ಬಿಲ್ಲವರು ಸಮಾಜ ಎಲ್ಲಾ ಕ್ಷೇತ್ರದಲ್ಲೂ ಸಕ್ರೀಯವಾಗಬೇಕು : ಮುದ್ರಾಡಿ ಮಂಜುನಾಥ ಪೂಜಾರಿ

ಗಮನ ಸೆಳೆದ ದೇಯಿ ಬೈದೆತಿಯ ಔಷಧಿಯ ಕುಟೀರ !

ಕೆರ್ವಾಶೆ : ನಮ್ಮ ಬಿಲ್ಲವ ಸಮುದಾಯದ ಯುವಕರು ಭವಿಷ್ಯದ ದಿನಗಳಲ್ಲಿ ಮುಖ್ಯವಾಹಿನಿಗೆ ಬರಬೇಕು, ಸಾಮಾಜಿಕ, ರಾಜಕೀಯ ಮತ್ತು ಉದ್ಯಮ ರಂಗದಲ್ಲಿ ಸಕ್ರೀಯವಾಗಬೇಕು. ಸರ್ಕಾರದ ವಿವಿಧ ಅವಕಾಶವನ್ನು ಸವಲತ್ತುಗಳನ್ನು ಪಡೆದು ಮುಂದೆ ಬರಬೇಕು. ನಮ್ಮ ಸಮಾಜದ ಸೇವೆ ಮಾಡಿದ್ದರಿಂದ ಇಂದು ನನಗೆ ರಾಜ್ಯದ ನಮ್ಮ ಜನರ ಸೇವೆ ಮಾಡುವ ಅವಕಾಶ ನನಗೆ ಲಭಿಸಿದೆ. ಸಮಾಜದ ಜೊತೆಗೆ ನಿರಂತರವಾಗಿ ಇರುತ್ತೇನೆ. ಸಮಾಜಕ್ಕೆ ಇನ್ನಷ್ಟು ಶಕ್ತಿ ತುಂಬವ ಕೆಲಸವನ್ನು ಮಾಡಬೇಕಿದೆ ಎಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಭಾನುವಾರ ಕೆರ್ವಾಶೆ ಬಂಗ್ಲಗುಡ್ಡೆ ಹುರಿಕುಮೇರು ದಯಾನಂದ ಸಾಲ್ಯಾನ್‌ ಅವರ ಗದ್ದೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ ಆಶ್ರಯದಲ್ಲಿ ಬಿಲ್ಲವ ಬಿಲ್ಲವ ಗ್ರಾಮ ಸಮಿತಿ ಕೆರ್ವಾಶೆ ನೇತ್ರತ್ವದಲ್ಲಿ ಭಾನುವಾರ ನಡೆದ ಆಟಿಡೊಂಜಿ ಕೆಸರ್ದ ಕೂಟ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಟಿಡೊಂಜಿ ಕೆಸರ್ದ ಕೂಟ ಸಂಭ್ರಮದಲ್ಲಿ ಖುಷಿ ಪಡುತ್ತೇವೆ, ಆ ಸಂಭ್ರಮ ನಿರಂತರವಾಗಿ ನಮ್ಮ ಜೀವನದಲ್ಲಿ ಇರಬೇಕು, ಸರಳ ಜೀವನದ ಮೂಲಕ ಶಕ್ತಿಯುತವಾಗಿ ಸಮಾಜ ಎಲ್ಲರೂ ಬೆಳೆಯಬೇಕು, ವಿಧ್ಯೆಯಿಂದ ಬಲಯುತರಾಗಬೇಕು, ಅತ್ಯುತ್ತಮ ವಿಧ್ಯೆಯನ್ನು ಪಡೆದು ಉದ್ಯೋಗ, ಉಧ್ಯಮ ಮಾಡಬೇಕು, ಕುಟುಂಬ ಮತ್ತು ಸಮಾಜವನ್ನು ಪ್ರೀತಿಸಿ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು. ಇದೇ ಸಂದರ್ಭದಲ್ಲಿ
ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಅವರನ್ನು ಗೌರವಿಸಲಾಯಿತು.

ವಿಭಿನ್ನ ಶೈಲಿಯಲ್ಲಿ ಆಟಿಡೊಂಜಿ ಕೆಸರ್ದ ಕೂಟ ಸಂಭ್ರಮ ನಡೆಯಿತು. ಬೈನೆ ಗಿಡವನ್ನು ಗದೆಯ ಬದಿಯಲ್ಲಿ ನೆಟ್ಟು ಬಿಲ್ಲವ ಸಮಾಜದ ಹಿನ್ನಲೆಯನ್ನು ಸಾರಲಾಯಿತು. ದೇಯಿ ಬೈದೆತಿಯ ಔಷಧಿಯ ಕುಟೀರವನ್ನು ಗದ್ದೆಯಂಚಿನಲ್ಲಿ ಮಾಡಿರುವುದು ವಿಶೇಷವಾಗಿತ್ತು. ಸಾರ್ವಜನಿಕರಿಗೆ, ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.

ಬಿಲ್ಲವ ಬಿಲ್ಲವ ಗ್ರಾಮ ಸಮಿತಿ ಕೆರ್ವಾಶೆಯ ಪ್ರಕಾಶ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ ಗೌರವಾಧ್ಯಕ್ಷ ಅನಿಲ್‌ ಎಸ್‌ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ ಪದಾಧಿಕಾರಿಗಳು, ಗ್ರಾಮ ಸಮಿತಿಯ ಪ್ರಮುಖರು, ಪ್ರಮುಖರು, ಗಣ್ಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments