ಕುಲಾಲ ಸಮಾಜಕ್ಕೆ ಸಮಾಜದಲ್ಲಿ ದೊಡ್ಡ ಹಿನ್ನಲೆಯಿದೆ : ಮುದ್ರಾಡಿ ಮಂಜುನಾಥ ಪೂಜಾರಿ.
ಕೆರ್ವಾಶೆ: ನಮ್ಮ ಕುಲಾಲ ಸಮುದಾಯದ ಯುವಕರು ಭವಿಷ್ಯದ ದಿನಗಳಲ್ಲಿ ಮುಖ್ಯವಾಹಿನಿಗೆ ಬರಬೇಕು, ಸಾಮಾಜಿಕ, ರಾಜಕೀಯ ಮತ್ತು ಉದ್ಯಮ ರಂಗದಲ್ಲಿ ಸಕ್ರೀಯವಾಗಬೇಕು. ದೇಶ ಮತ್ತು ಸಮಾಜಕ್ಕೆ ಶಕ್ತಿಯಾಗಿ ಮುನ್ನಡೆಯಬೇಕು ಸರ್ಕಾರದ ವಿವಿಧ ಅವಕಾಶವನ್ನು ಸವಲತ್ತುಗಳನ್ನು ಪಡೆದು ಮುಂದೆ ಬರಬೇಕು. ಕುಲಾಲ ಸಮಾಜಕ್ಕೆ ಸಮಾಜದಲ್ಲಿ ದೊಡ್ಡ ಹಿನ್ನಲೆಯಿದೆ. ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ ಪುರಾತನ ಹಿನ್ನಲೆಯ ಸಮಾಜ ಎಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಕೆರ್ವಾಶೆಯ ಮುಡಾಯಿಬೆಟ್ಟು ಗದ್ದೆಯಲ್ಲಿ ಕುಲಾಲ ಸಂಘ ಕೆರ್ವಾಶೆ ಮತ್ತು ಕುಲಾಲ ಮಹಿಳಾ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ಕೆಸರ್ದ ಕಂಡೊಡು ಕುಲಾಲೆರೆನ ಕುಸಲ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ವಿಧ್ಯೆಗೆ ಹೆಚ್ಚಿನ ಮಹತ್ವವನ್ನು ಉನ್ನತ ಶಿಕ್ಷಣವನ್ನು ನೀಡಿ ಮುಖ್ಯವಾಹಿನಿಯಲ್ಲಿ ಉದ್ಯೋಗ, ಉದ್ಯಮವನ್ನು ಕುಲಾಲ ಬಂಧುಗಳು ಮಾಡುವಂತಾಗಬೇಕು ಎಂದು ಮಂಜುನಾಥ ಪೂಜಾರಿ ಆಶಿಸಿದರು.
ಪಂಚವರ್ಣದ ತುಳುವ ಮಣ್ಣಿನ ಶ್ರೀಮಂತ ಪರಂಪರೆ, ಶಿಲೆ, ಕಾಷ್ಠ, ಮೃತ್ತಿಕೆಯಲ್ಲಿ ದೇವತಾರಾಧನೆ, ದೈವರಾಧನೆ, ನಾಗಾರಾಧನೆಯ ಧಾರ್ಮಿಕ ಮತ್ತು ಆಟ ಕೋಲ, ಕಂಬುಲ, ಅಂಕ ಆಯನದ ಸಾಂಸ್ಕೃತಿಕ ಸೊಗಡನ್ನು ಪ್ರತಿಬಿಂಬಿಸುವ ಅನಾದಿ ಕಾಲದಿಂದಲೂ ಗ್ರಾಮೀಣ ಜನರ ಬದುಕಿಗೆ ಜೀವನೋತ್ಸವ ತುಂಬಿದ ಭಿನ್ನ ಶೈಲಿಯ ಕೆಸರ್ದ ಕಂಡೊಡು ಕುಲಾಲೆರೆನ ಕುಸಲ್ದ ಗೊಬ್ಬುಲು ವಿಭಿನ್ನ ವಿನೂತನ ಕಾರ್ಯಕ್ರಮ ಸಂಭ್ರಮ ನಡೆಯಿತು.
ಕುಂಭನಿಧಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ಕುಶ ಆರ್ ಮೂಲ್ಯ, ಕೆರ್ವಾಶೆ ಕುಲಾಲ ಸಂಘದ ಗೌರವಾಧ್ಯಕ್ಷ ಜಯರಾಮ ಬಂಗೇರ, ಅಧ್ಯಕ್ಷ ಸುಧೀರ್ ಬಂಗೇರ, ಮುಂದರ ಮೂಲ್ಯ ಮುಡಾಯಿಬೆಟ್ಟು, ಕಾರ್ಯದರ್ಶಿ ಸತೀಶ್ ಕಜ್ಜೋಡಿ, ಮಹಿಳಾ ಸಂಘದ ಅಧ್ಯಕ್ಷೆ ವಿಮಲ ಜಯ ಮೂಲ್ಯ, ಕಾರ್ಯದರ್ಶಿ ಜಯಂತಿ ಪೂವಪ್ಪ ಕುಲಾಲ್ ಮತ್ತು ಪದಾಧಿಕಾರಿಗಳು ಇದ್ದರು.


