Wednesday, September 23, 2026
Homeಕಾರ್ಕಳಕಾರ್ಕಳ: ಉಚಿತ ಹಿಜಾಮ ಹಾಗೂ ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರ

ಕಾರ್ಕಳ: ಉಚಿತ ಹಿಜಾಮ ಹಾಗೂ ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರ

ಕಾರ್ಕಳ : ಕಾರ್ಕಳ ಮೆಡಿಕಲ್ ಹೆಲ್ಪ್ ಲೈನ್ (ರಿ) ಡಾ. ಸರ್ಫರಾಜ್ ಅಹ್ಮದ್, ಡಾ. ಅಬ್ಸರ್ ಅಲ್ ಹುದಾ ಹಾಗೂ ಕಾರ್ಕಳ ಮೆಟ್ರೋ ಪೊಲೀಸ್ ಲ್ಯಾಬ್ ಇವರಗುಳ ಸಂಯುಕ್ತ ಆಶ್ರಯದಲ್ಲಿ ಉಚಿತ ಹಿಜಾಮ ಹಾಗೂ ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರ ಇತ್ತೀಚಿಗೆ ಮದೀನಾ ಮಸೀದಿ ಸಬಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ ಕಾರ್ಕಳ, ಸಿಟಿ ನರ್ಸಿಂಗ್ ಹೋಮ್ ವೈದ್ಯ ಡಾ. ರಿಜ್ವಾನ್ ಅಹಮದ್ ಕಾರ್ಕಳ, ಜಮೀಯತುಲ್ ಫಲಾಹ್ ದ. ಕ ಹಾಗೂ ಉಡುಪಿ ಜಿಲ್ಲಾ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಕಾರ್ಕಳ , ಕೆ. ಎಂ. ಇ. ಎಸ್ ಅಧ್ಯಕ್ಷ ಕೆ. ಎಸ್ ಇಮ್ತಿಯಾಜ್ ಅಹ್ಮದ್, ಅಂಜುಮನ್ ಈ ಅನಾಥುಲ್ ಇಸ್ಲಾಂನ ಅಧ್ಯಕ್ಷ ಸಯೀದ್ ಹಯಾತ್ ಪಾಷಾ, ಕಾರ್ಕಳ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸಯೀದ್ ಮುಸ್ತಾಕ್ ಅಹಮದ್ , ಕೆ. ಪಿ.ಸಿ.ಸಿ ಅಲ್ಪಸಂಖ್ಯಾತರ ಘಟಕ ರಾಜ್ಯ ಕಾರ್ಯದರ್ಶಿ ಶೇಖ್ ವಾಹಿದ್ ದಾವೂದ್ ಸಾಹೇಬ್, ಆಯಿಷಾ ಜ್ಯುವೆಲ್ಲರ್ಸ್ ಮಾಲೀಕ ಅಸ್ಲಾಂ, ಉದ್ಯಮಿ ಸಯಿದ್ ರಿಜ್ವಾನ್ ಅಹಮದ್, ಉದ್ಯಮಿ ಶಾಕಿರ್ ಶೀಶ್, ವೇದಿಕೆಯಲ್ಲಿ ಉಪಸ್ಥಿರಿದ್ದರು. ಮೌಲಾನಾ ಹಫೀಝ್ ಕಾಸಿಮಿ ಕಿರಾತ್ ಪಠಿಸಿದರು, ಕಾರ್ಕಳ ಮೆಡಿಕಲ್ ಹೆಲ್ಪ್ ಲೈನ್ ಮೊಹಮ್ಮದ್ ರಿಜ್ವಾನ್ ಕಾರ್ಯಕ್ರಮ ನಿರುಪಿಸಿದರು. ಮೌಲಾನಾ ಅಜೀಜ್ ಸ್ವಾಗತಿಸಿದರು. ಕಾರ್ಕಳ ಮೆಡಿಕಲ್ ಹೆಲ್ಪ್ ಲೈನ್ ನ ಇಮ್ರಾನ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!