ಮೂಡಬಿದರೆ : 10 ನೇ ಶತಮಾನದ 1200 ವರ್ಷ ಹಳೆಯ ಮೂಡಬಿದರೆಯ ಸುತ್ತಲ ಹಳ್ಳಿಯ ಗ್ರಾಮ ದೇವತೆ ನೆಲೆಸಿರುವ ಗೌರಿ ದೇವಸ್ಥಾನದಲ್ಲಿ ಇದೇ ಆಗಸ್ಟ್ 28 ರಂದು ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಹಾಗೂ ವೃತ ನಡೆಯಲಿದೆ.
ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಗ್ಗೆ 8.30ಕ್ಕೆ ವೃತ ಸಂಕಲ್ಪ ಪೂಜೆ ಪ್ರಾರಂಭವಾಗಿ 11.30 ಸರಿಯಾಗಿ ಮಹಾಪೂಜೆ .ನಂತರ 12.30 ರಿಂದ 2.30 ra ತನಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ವರಮಹಾಲಕ್ಷ್ಮಿ ಸಂಕಲ್ಪ ಪೂಜೆ ಮಾಡಿಸುವವರು 8, 30ಕ್ಕೆ ಗಂಟೆಗೆ ಬರಬೇಕು. ಭಕ್ತ ಬಾಂಧವರ ತನು ಮನ ಧನ ಧಾನ್ಯ ಸಹಕಾರದೊಂದಿಗೆ ನಡೆಯುವ ಹಬ್ಬಕ್ಕೆ ಬಂದು ಗಂಧ ಪ್ರಸಾದ ಸ್ವೀಕರಿಸಿ ಗ್ರಾಮ ದೇವತೆ ಕೃಪೆಗೆ ಪಾತ್ರರಾಗುವಂತೆ
ಅನುವಂಶೀಯ ಅರ್ಚಕ ಹಾಗೂ ಆಡಳಿತ ಮೊಕ್ತೇಸರರಾದ ರಾಜೇಶ್ ಭಟ್ ಹಾಗೂ ಗೌರೀ ದೇವಸ್ಥಾನದ ಸಮಸ್ತ ಭಕ್ತ ವೃಂದ ವಿನಂತಿಸಿದೆ.



