ಹೆಬ್ರಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ( ರಿ.) ಹೆಬ್ರಿಯ ಆಶ್ರಯದಲ್ಲಿ ಜರಗಲಿರುವ 51ನೇ ವರ್ಷದ ಸಂಭ್ರಮದ ಹೆಬ್ರಿ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಹೆಬ್ರಿ ಅನಂತಪದ್ಮನಾಭ ಸನ್ನಿಧಿಯಲ್ಲಿ ನಡೆಯಿತು
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಜನಾರ್ಧನ್ ಎಚ್, ಉಪಾಧ್ಯಕ್ಷ ಪ್ರಕಾಶ್ ಮಲ್ಯ ನೂತನ ಕಾರ್ಯಾಧ್ಯಕ್ಷ ಮುದ್ದು ಪೂಜಾರಿ ಗುಳಿಬೆಟ್ಟು ಪ್ರಧಾನ ಕಾರ್ಯದರ್ಶಿ ,ರಾಜೇಶ್ ಆಚಾರ್ಯ ಮಠದ ಬೆಟ್ಟು, ಉಪಾಧ್ಯಕ್ಷ ಶಂಕರ್ ಸೇರಿಗಾರ್ ದೇವಸ್ಥಾನ ಬೆಟ್ಟು,ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಬಾಸರ ಬೆಟ್ಟು , ಮಹಿಳಾ ಸಮಿತಿಯ ಅಧ್ಯಕ್ಷ ಬಾನು ಪಿ ಬಲ್ಲಾಳ್, ಅರ್ಚಕರಾದ ಗುರುಮೂರ್ತಿ ಜೋಯಿಸ್,ನಾಗರಾಜ್ ಜೋಯಿಸ್, ರಾಮಕೃಷ್ಣ ಆಚಾರ್ಯ, ಸಂತೋಷ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.




