Thursday, September 24, 2026
Homeಹೆಬ್ರಿಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ: ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ...

ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ: ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ – ಸೆ. 05ರಂದು 2026 ಚಿತ್ತಾಕರ್ಷಕ ಶೋಭಾಯಾತ್ರೆ

ಹೆಬ್ರಿ : ಭಗವಾನ್ ಶ್ರೀಕೃಷ್ಣನ ಜನ್ಮಾಷ್ಟಮಿಯ ಪಾವನ ಶುಭ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಸಂಸ್ಥೆಯಾದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ (State), ಅಮೃತ ಭಾರತಿ ವಿದ್ಯಾಕೇಂದ್ರ (CBSE) ಹಾಗೂ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ 2500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಭವ್ಯ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಸೆಷ್ಟಂಬರ್ 05 -;ಶನಿವಾರ | ಸಮಯ: ಬೆಳಿಗ್ಗೆ 10.00 ಗಂಟೆಗೆ ಶೋಭಾಯಾತ್ರೆ ಆರಂಭಗೊಳ್ಳಲಿದೆ.

ಶೋಭಾಯಾತ್ರೆ ಪ್ರಾರಂಭವಾಗುವ ಸ್ಥಳ:

1. ಶ್ರೀ ಅನಂತಪದ್ಮನಾಭ ದೇವಸ್ಥಾನ ಹೆಬ್ರಿ
2. ಬಂಟರ ಭವನ ಆಗುಂಬೆ ರಸ್ತೆ, ಹೆಬ್ರಿ
3. ಶ್ರೀ ಗಜಾನನ ಗೇರುಬೀಜ ಕಾರ್ಖಾನೆ, ಕುಚ್ಚೂರು ರಸ್ತೆ. ಹೆಬ್ರಿ.

ಮೂರು ಕಡೆಗಳಿಂದ ಹೊರಡುವ ಮೆರವಣಿಗೆಯು ಹೆಬ್ರಿ ಪೇಟೆಯ ಮುಖ್ಯ ವೃತ್ತದಲ್ಲಿ ಒಟ್ಟಾಗಿ ಸಾಗಲಿದ್ದು, ಹೆಬ್ರಿ ಮುಖ್ಯ ವೃತ್ತದಲ್ಲಿ ಮೊಸರು ಕುಡಿಕೆ ಉತ್ಸವವನ್ನು ನೆರವೇರಿಸಿ, ಭವ್ಯ ಶೋಭಾಯಾತ್ರೆಯು ಅಮೃತ ಭಾರತಿ ಕ್ರೀಡಾಂಗಣ ತಲುಪಲಿದೆ

ಶೋಭಾಯಾತ್ರೆ ಅಮೃತ ಭಾರತಿ ಕ್ರೀಡಾಂಗಣ ತಲುಪಿದ ನಂತರ ಕ್ರೀಡಾಂಗಣದಲ್ಲಿ ನೃತ್ಯ, ಹುಲಿ ವೇಷ, ಯಕ್ಷಗಾನ, ಭಜನೆ, ಕೋಲಾಟ, ಜಾಗಟೆ ಶಂಖನಾದ, ಮೊಸರು ಕುಡಿಕೆ ಇತ್ಯಾದಿ ಚಿತ್ತಾಕರ್ಷಕ ಕಾರ್ಯಕ್ರಮಗಳು ನಡೆಯಲಿವೆ.

ಹೆಬ್ರಿಯ ನಾಗರಿಕ ಬಂಧುಗಳು ಶ್ರೀಕೃಷ್ಣದೇವರ ಭಾವಚಿತ್ರಕ್ಕೆ, ಭಗವದ್ಧ್ವಜಕ್ಕೆ ಹಾಗೂ ಪುಟ್ಟ ಕೃಷ್ಣ, ಬಲರಾಮ, ಗೋಪಿ, ರಾದಾ ವೇಷಧಾರಿ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಬೇಕಾಗಿ ವಿನಂತಿ.

ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಊರಿನ ನಾಗರಿಕರು ಭಾಗವಹಿಸಲು ಮುಕ್ತ ಆಮಂತ್ರಣ ನೀಡಲಾಗಿದೆ ಎಂದು ಅಮೃತ ಭಾರತಿ ಟ್ರಸ್ಟಿನ ಆಡಳಿತ ಮಂಡಳಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!