Wednesday, September 23, 2026
Homeಕಾರ್ಕಳಸೆಪ್ಟೆಂಬರ್ 07: ಮುಂಡ್ಲಿ ಶಾಲೆಯಲ್ಲಿ ಗುರುಚರಣಕೆ ನಮನ ಕಾರ್ಯಕ್ರಮ.

ಸೆಪ್ಟೆಂಬರ್ 07: ಮುಂಡ್ಲಿ ಶಾಲೆಯಲ್ಲಿ ಗುರುಚರಣಕೆ ನಮನ ಕಾರ್ಯಕ್ರಮ.

ಶಿಕ್ಷಕ ಶಂಕರ್ ಡೊಂಗ್ರೆ ಅವರಿಗೆ ಗೌರವಾರ್ಪಣೆ, ಶಿಕ್ಷಕರಿಗೆ – ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನೆ.

ಮುಂಡ್ಲಿ (ಕಾರ್ಕಳ ). : ಜಾರ್ಕಳ ಮುಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 07 ರಂದು ಶಾಲಾ ಸಭಾಂಗಣದಲ್ಲಿ ಗುರುಚರಣಕೆ ನಮನ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಎಸ್ ಡಿಎಂಸಿ ಅಧ್ಯಕ್ಷ ಅಶೋಕ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕಾರ್ಕಳದ ಜಗದೀಶ್ ಹೆಗ್ಡೆ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರತ್ಮಮ್ನ ಎಸ್‌. ಬಿ., ಎಸ್ ಡಿಎಂಸಿ ಉಪಾಧ್ಯಕ್ಷೆ ಸವಿತ ಲಕ್ಷ್ಮಣ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜ್ವಲ್ ಕುಮಾರ್ ಜೈನ್ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಶಾಲಾ ಪ್ರಾರಂಭದ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ ಟಿ. ಶಂಕರ್ ಡೊಂಗ್ರೆ ಅವರಿಗೆ ಗೌರವಾರ್ಪಣೆ, ಶಿಕ್ಷಕರಿಗೆ – ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನೆ ನಡೆಯಲಿದೆ. ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್ ಅವರಿಂದ ಶೈಕ್ಷಣಿಕ ಸಂವಾದ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!