ಮುದ್ರಾಡಿ ಕಚೇರಿಯಲ್ಲಿ ಸಿಬ್ಬಂದಿ ನಿಯೋಜಿಸಲು ಒತ್ತಾಯ.
ಹೆಬ್ರಿ : ಮೆಸ್ಕಾಂ ಹೆಬ್ರಿ ಉಪ ವಿಭಾಗ ವ್ಯಾಪ್ತಿಯ ಮುದ್ರಾಡಿ ಶಾಖಾ ಕಚೇರಿಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಲು, ಅಧಿಕಾರಿಗಳನ್ನು ನಿಯೋಜನೆ ಮಾಡುವಂತೆ ಸಂತೋಷ್ ಕುಮಾರ್ ಶೆಟ್ಟಿ ಮನವಿ ಮಾಡಿದರು.
ಅವರು ಹೆಬ್ರಿ ಮೆಸ್ಕಾಂ ವತಿಯಿಂದ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಮಾಡಿದರು.
ಉಡುಪಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ರಾಕೇಶ್ ಮಾತನಾಡಿ, ಹೆಬ್ರಿಯ ಶಾಖಾಧಿಕಾರಿ ಮುದ್ರಾಡಿಯಲ್ಲಿ ಇವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುದ್ರಾಡಿಯಲ್ಲಿ ಶೀಘ್ರವಾಗಿ ಅಧಿಕಾರಿಗಳು ನಿಯೋಜನೆ ಮಾಡಿ ಜನಪರ ಕೆಲಸ ಮಾಡಲಾಗುತ್ತದೆ ಎಂದರು.
ಹೆಬ್ರಿ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಶೇರಿಗಾರ್, ಮೆಸ್ಕಾಂ ಇಇ ನರಸಿಂಹ, ಎಇಇ ನಾಗರಾಜ್, ಎಇ ರಾಧಿಕಾ, ಎಂಜಿನಿಯರ್ ಗಳಾದ ಲಕ್ಷೀಶ್ ಮಂಜಪ್ಪ ನಾಯ್ಕ್, ಸಂದೀಪ್, ವಿದ್ಯುತ್ ಪ್ರಥಮದರ್ಜೆ ಗುತ್ತಿಗೆದಾರ ಶ್ರೀನಿವಾಸ್ ಹೆಬ್ಬಾರ್ ಶಿವಪುರ ಇದ್ದರು.



