ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ 51 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಕ್ರಿಕೆಟ್ ಪಂದ್ಯಾಟ ನಡೆಯಿತು. ಕ್ರೀಡಾ ಪೋಷಕ ಅಶೋಕ್ ಹೆಗ್ಡೆ ಹೆಬ್ರಿ ಅವರು ಚಾಲನೆ ನೀಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ್ ಎಚ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಾಧ್ಯಕ್ಷ ಮುದ್ದು ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಉಪಾಧ್ಯಕ್ಷರಾದ ದಿವಾಕರ ಶೆಟ್ಟಿ,ಶಂಕರ ಸೇರಿಗಾರ್,ಪ್ರಕಾಶ್ ಮಲ್ಯ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಕ್ರೀಡಾ ಸಂಚಾಲಕ ಕರುಣಾಕರ ಸೇರಿಗಾರ್,ದೈಹಿಕ ಶಿಕ್ಷಣ ಶಿಕ್ಷಕ ಜಯ ಶೆಟ್ಟಿ ,ದೇವಾನಂದ ನಾಯಕ್ ಸತೀಶ್ ನಾಯ್ಕ್ ಅವಿನಾಶ್ ಜೋಗಿ, ಟಿ ಜಿ ಅಚಾರ್ಯ,ರವಿಚಂದ್ರ ಹೆಗ್ಡೆ ,ಉದ್ದವ್ ಪ್ರಭು,ಮುಂತಾದವರು ಉಪಸ್ಥಿತರಿದ್ದರು.
ಹೆಬ್ರಿ ಕ್ರಿಕೆಟರ್ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಶಿವ ಫ್ರೆಂಡ್ಸ್ ಬೆಳಂಜೆ ಇವರು ಪಡೆದುಕೊಂಡರು.




