ಕಾರ್ಕಳ : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಆಡಳಿತಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದ ರಾಚಪ್ಪಜಿ ಅವರು ಪದೋನ್ನತಿ ಹೊಂದಿ ಕಾರ್ಕಳ ಕಂದಾಯ ನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮೂಲತಃ ಮೈಸೂರಿನವರಾದ ರಾಚಪ್ಪಜಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆಗೆ ಪಾದಾರ್ಪಣೆ ಮಾಡಿದ್ದರು.
ಬಳಿಕ ಹಿರಿಯಡ್ಕದಲ್ಲಿ ಸೇವೆ ಸಲ್ಲಿಸಿದರು. ಅವಿಭಜಿತ ಕಾರ್ಕಳ ತಾಲೂಕಿನ ವರಂಗ, ನಾಡ್ಪಾಲು, ಬೇಳಂಜೆ ಕುಚ್ಚೂರು, ಶಿವಪುರ ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದಾರೆ.



