Wednesday, September 23, 2026
Homeವರಂಗ ಗ್ರಾಮ ಪಂಚಾಯತ್‌ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಪಡುಕುಡೂರು ಶಾಲೆಗೆ ಸ್ಮಾರ್ಟ್ ಟಿ.ವಿ ಕೊಡುಗೆ : ಹಸ್ತಾಂತರ .

ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಪಡುಕುಡೂರು ಶಾಲೆಗೆ ಸ್ಮಾರ್ಟ್ ಟಿ.ವಿ ಕೊಡುಗೆ : ಹಸ್ತಾಂತರ .

ಮುನಿಯಾಲು : ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಪಡುಕುಡೂರು ಶಾಲೆಗೆ ದೊಡ್ಡ ಗಾತ್ರದ ಸ್ಮಾರ್ಟ್ ಟಿ.ವಿ ಯನ್ನು ಕೊಡುಗೆಯಾಗಿ ನೀಡಿದ್ದು ಸೋಮವಾರ ಶಾಲೆಗೆ ಹಸ್ತಾಂತರ ಮಾಡಲಾಯಿತು.

ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ದೊಂಡೇರಂಗಡಿ, ಕಾರ್ಯದರ್ಶಿ ಗೋಫಿನಾಥ್ ಭಟ್, ಪೂಜಾ ಶಂಕರ ಶೆಟ್ಟಿ, ಭುಜಂಗ ಶೆಟ್ಟಿ, ಹರೀಶ್ ಶೆಟ್ಟಿ ಪಡುಪರ್ಕಳ
ಮಾತನಾಡಿ ಪಡುಕುಡೂರು ಶಾಲೆ ಮತ್ತು ಮುನಿಯಾಲು ಲಯನ್ಸ್ ಕ್ಲಬ್ ಗೆ ಇರುವ ಅವಿನಾಭ ಸಂಬಂಧವನ್ನು ಸ್ಮರಿಸಿದರು. ಶಾಲಾ ಮುಖ್ಯ ಶಿಕ್ಷಕ ಹರೀಶ್ ಪೂಜಾರಿ.ಎಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಶಾಲಾ ನಾಯಕಿ ಅನನ್ಯಾ ಉಪಸ್ಥಿತರಿದ್ದರು.

ಶಾಲಾ ಗೌರವ ಶಿಕ್ಷಕಿ ಭಾವನಾ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕ ಹರೀಶ್ ಪೂಜಾರಿ ನಿರೂಪಿಸಿ, ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!