ಹೆಬ್ರಿ : ಪಿಎಸ್ಎನ್ ಆಟೋಮೋಟಿವ್ ಮಾರ್ಕೆಟಿಂಗ್ ವತಿಯಿಂದ, ತರಬೇತುದಾರರಾದ ಸತೀಶ್ ಅವರು, ಶಾಲಾವಾಹನ ಚಾಲಕರಿಗೆ ಇರಬೇಕಾದ ಶಿಸ್ತು, ಶಾಲಾ ವಾಹನದಲ್ಲಿ ಮಕ್ಕಳ ಸುರಕ್ಷತೆ, ವಾಹನದ ನಿರ್ವಹಣೆ, ವಾಹನದ ಸ್ವಚ್ಛತೆ, ರಸ್ತೆಯ ತಿರುವಿನ ಜಾಗೃತಿ, ಅಪಘಾತದ ಎಚ್ಚರಿಕೆ ಮುಂತಾದ ವಿಷಯಗಳ ಬಗ್ಗೆ ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಶಾಲಾವಾಹನ ಚಾಲಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಸ್.ಆರ್. ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲ ದೀಪಕ್ ಎನ್, ಪಿ.ಎಸ್.ಎನ್ ಆಟೋಮೋಟಿವ್ ಮಾರ್ಕೆಟಿಂಗ್ ನ ಪ್ರದೀಪ್ ಕುಮಾರ್, ರವೀಂದ್ರ, ಶಾಲಾ ಕಚೇರಿಯ ಮ್ಯಾನೇಜರ್ ವಿನಯಾ ಉಪಸ್ಥಿತರಿದ್ದರು.




