ಹೆಬ್ರಿ : ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ವಿಷ್ಣುಯಾಗ, ಲಕ್ಷ ತುಳಸಿ ಅರ್ಚನೆ, ಹಾಗೂ ಅನ್ನಸಂತರ್ಪಣೆ ನಡೆಯಿತು. ವಿದ್ವಾನ್ ಶ್ರೀ ಅನಂತಕೃಷ್ಣ ಆಚಾರ್ಯ ಉಡುಪಿ ಅವರಿಂದ ೧ ವಾರಗಳ ಕಾಲ ನಡೆದ ಶ್ರೀಮದ್ಭಾಗವತ ಪ್ರವಚನ ಸಪ್ತಾಹದ ಸಂಪನ್ನ ಕಾರ್ಯಕ್ರಮ ನಡೆಯಿತು.
ಹೆಬ್ರಿ ಅನಂತಶ್ರೀ ಮಹಿಳಾ ಮತ್ತು ಮಕ್ಕಳ ಯಕ್ಷಕಲಾ ಮಂಡಳಿಯ ಸದಸ್ಯೆಯರಿಂದ ಯಕ್ಷಗಾನ ನಡೆಯಿತು. ನೂರಾರು ಮಂದಿ ಭಕ್ತ ಸಮೂಹ ಭಾಗವಹಿಸಿದ್ದರು. ದೇವಸ್ಥಾನದ ಅನುವಂಶಿಕಾ ಮೋಕ್ತೇಸರ ತಾರಾನಾಥ ಬಲ್ಲಾಳ್, ಅರ್ಚಕರು, ಸಮಿತಿಯ ಸದಸ್ಯರು, ವಿವಿಧ ಪ್ರಮುಖರು ಉಪಸ್ಥಿತರಿದ್ದರು.



